ವಾಷಿಂಗ್ಟನ್ : ರಷ್ಯಾ ಹಾಗೂ ರಷ್ಯಾದ ಜತೆ ವ್ಯಾಪಾರ ಮಾಡುವ ದೇಶಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ರಷ್ಯಾದಿಂದ ತೈಲ ಹಾಗೂ ಯುರೇನಿಯಂ ಖರೀದಿ ಮಾಡುವ ದೇಶಗಳಿಗೆ ೫೦೦%ವರೆಗೆ ಸುಂಕ ಹಾಕಲು ಅನುವು ಮಾಡಿಕೊಡುವ ಮಸೂದೆಯೊಂದನ್ನು ಜಾರಿಗೆ ತರಲು ಟ್ರಂಪ್ ಸರ್ಕಾರ ಈಗ ಮುಂದಾಗಿದೆ ಎಂದು ವರದಿಯಾಗಿದೆ. ಇದರಿಂದ ಭಾರತ, ಚೀನಾ, ಬ್ರೆಜಿಲ್ ಸೇರಿದಂತೆ ರಷ್ಯಾದಿಂದ ತೈಲ ಹಾಗೂ ಇನ್ನಿತರ ಕೆಲ ಉತ್ಪನ್ನಗಳನ್ನು ಖರೀದಿ ಮಾಡುವ ದೇಶಗಳಿಗೆ ಭಾರಿ ಆರ್ಥಿಕ ಹೊಡೆತ ಬೀಳಲಿದೆ. ಇದನ್ನು ಗ್ರಹಾಂ-ಬ್ಲುಮೆAಥಾಲ್ ನಿರ್ಬಂಧ ಮಸೂದೆ ಎಂದು ಕರೆಯಲಾಗಿದೆ.
ಈ ಬಗ್ಗೆ ಖುದ್ದು ಮಾತನಾಡಿದ ಗ್ರಹಾಂ, ಒಂದೊಮ್ಮೆ ಇದು ಜಾರಿಯಾ ದರೆ ರಷ್ಯಾ-ಉಕ್ರೇನ್ ಯುದ್ಧ ಶಾಂತಿಗೆ ಸಹಕಾರಿಯಾಗಬಹುದು ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರು ರಚಿಸಿರುವ ಈ ಮಸೂದೆಯು, ರಷ್ಯಾದ ತೈಲ, ಅನಿಲ, ಯುರೇನಿಯಂ ಮತ್ತು ಇತರ ರಫ್ತುಗಳನ್ನು ಖರೀದಿಸುವ ದೇಶಗಳ ಮೇಲೆ ಶೇ.500 ರಷ್ಟು ಸುಂಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಲು ಟ್ರಂಪ್ ಆಡಳಿತಕ್ಕೆ ಅವಕಾಶ ನೀಡುತ್ತದೆ.


