ವಾಷಿಂಗ್ಟನ್ : ಒಮ್ಮೆ ಸೋತು ಮತ್ತೆ ಗೆದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಸೋಮವಾರ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಲಿರುವ ಟ್ರಂಪ್, ಇದೇ ವೇಳೆ ಉದ್ಘಾಟನಾ ಭಾಷಣವನ್ನೂ ಮಾಡಲಿದ್ದಾರೆ. ಈ ಭಾಷಣದಲ್ಲಿ ಟ್ರಂಪ್ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ ಎಂಬ ಕುತೂಹಲ ವಿಶ್ವ ರಾಜತಾಂತ್ರಿಕರ ಕಣ್ಣು ಕಿವಿಯನ್ನು ನೆಟ್ಟಗಾಗಿಸಿದೆ.
ಅಮೆರಿಕಾದ ೪೭ನೇ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಭಾರತೀಯ ಕಾಲಮಾನ ಇಂದು ರಾತ್ರಿ 10.30ಕ್ಕೆ ಅಧಿಕಾರ ಸ್ವೀಕಾರಿಸಲಿದ್ದಾರೆ. ಈ ಮೂಲಕ ಎರಡನೇ ಅವಧಿಯ ಟ್ರಂಪ್ ಯಗಾರಂಭ ನಾಳೆಯಿಂದ ಅಮೆರಿಕಾದಲ್ಲಿ ಆರಂಭವಾಗಲಿದೆ.
ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಾಷಿಂಗ್ಟನ್ ಡಿಸಿಯಲ್ಲಿ ವಿಕ್ಟರಿ ರ್ಯಾಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಸಾಮೂಹಿಕ ಗಡೀಪಾರು ಕಾರ್ಯಾಚರಣೆ, ಪ್ರಾರಂಭಿಸಲು, ಪರಿಸರ ನಿಯಮ ಕಡಿತ ಮತ್ತು ವೈವಿಧ್ಯತೆ ಕಾರ್ಯಕ್ರಮಗಳನ್ನು ಕೊನೆಗೊಳಿಸುವುದು ಸೇರಿದಂತೆ ಅಮೆರಿಕಾದ ಜನರ ರಕ್ಷಣೆ ತಮ್ಮ ಮೊದಲ ಆಧ್ಯತೆ ಎಂದು ತಿಳಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ತಕ್ಷಣ ಸುಮಾರು 2೦೦ ಆದೇಶಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಇವೆಲ್ಲವೂ ಅಮೆರಿಕಾದ ಜನರ ಆದ್ಯತೆ ಮತ್ತುಹಿತ ರಕ್ಷಣೆ ಕಾಪಾಡುವುದೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎರಡನೇ ಅವಧಿಯಲ್ಲಿ ಅಮೆರಿಕಾ ಆಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಮರು ಕ್ಷಣದಿಂದ ಮುಂದಿನ ನಾಲ್ಕು ವರ್ಷಗಳ ಕಾಲ ಅಮೇರಿಕಾ ಅಭಿವೃದ್ಧಿಯೇ ತಮ್ಮ ಮೂಲ ಮಂತ್ರ. ಅಮೆರಿಕಾದ ಜನರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕ ಹಲವು ಐತಿಹಾಸಿಕ ಕಡತಗಳಿಗೆ ಸಹಿ ಹಾಕುವುದಾಗಿ ಪ್ರಕಟಿಸಿದ್ದಾರೆ.
ಇದೇ ವೇಳೆ ಭಾರತದ ಆರ್ಥಿಕತೆಯು ಅಮೆರಿಕದ ಆರ್ಥಿಕತೆ ಜೊತೆ ನಿಕಟ ಸಂಬAಧ ಹೊAದಿರುವುದರಿAದ ಆ ದೇಶದಲ್ಲಾಗುವ ಯಾವುದೇ ನೀತಿ ಬದಲಾವಣೆಗಳು ಭಾರತದ ಮೇಲೂ ಪರಿಣಾಮ ಉಂಟು ಮಾಡುತ್ತಿವೆ. ಇದು ವ್ಯಾಪಾರ ಹರಿವನ್ನು ಮರುರೂಪಿಸಬಹುದು ಅಥವಾ ಜಾಗತಿಕ ಮೈತ್ರಿಯನ್ನೂ ಬದಲಾಯಿಸಬಹುದು ಇಲ್ಲವೇ ಬಂಡವಾಳ ಹರಿವಿನ ಪರಿಣಾಮ ಬೀರಬಹುದು. ಟ್ರಂಪ್ ಈಗ ಅಮೆರಿಕದ ಕಂಪನಿಗಳನ್ನು ಉತ್ತೇಜಿಸಲು ಅಮೆರಿಕ ಫಸ್ಟ್ ಎನ್ನುವಕಾರ್ಯಸೂಚಿ ಹೊಂದಿದ್ದಾರೆ. ಹೀಗಾಗಿ ಅಮೆರಿಕ ಕೇಂದ್ರಿತ ವ್ಯಾಪಾರ ಕ್ರಮಗಳು
ವ್ಯಾಪಾರ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಅವರ ಆಡಳಿತ ಭಾರತವನ್ನು ಒತ್ತಾಯಿಸುವ ಸಾಧ್ಯತೆಗಳಿವೆ.
ಫಾರ್ಮಾಸ್ಯೂಟಿಕಲ್, ಐಟಿ, ಜವಳಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಮೆರಿಕವು ಭಾರತದಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಆದ್ದರಿಂದ ಸ್ಪರ್ಧೆ ಎದುರಿಸುವ ಈ ಕ್ಷೇತ್ರಗಳಲ್ಲಿ ಭಾರತೀಯ ರಫ್ತುದಾರರು ಹೆಚ್ಚಿನ ಸುಂಕ ಎದುರಿಸುವ ಸಂಭವವಿದೆ. ಈ ನಡುವೆ ಟ್ರಂಪ್ ಅವರ ಚೀನಾ ವಿರೋಧಿ ನಿಲುವು ಭಾರತ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದಲ್ಲಿ ಅದರಿಂದ ಭಾರತಕ್ಕೆ ಲಾಭವಾಗಲಿದೆ. ಪೂರೈಕೆ ಸರಪಳಿ ವೈವಿಧ್ಯಗೊಳಿಸಲು ಹಾಗೂ ಕಡಿಮೆ ವೆಚ್ಚದ ಸ್ಥಳಗಳಿಗೆ ಕಾರ್ಯಾಚರಣೆ ಸ್ಥಳಾಂತರಿಸಲು ಬಯಸುವ ಅಮೆರಿಕದ ಕಂಪನಿಗಳಿಗೆ ಭಾರತವು ಪರ್ಯಾಯ ಕಾರ್ಯಸಾಧ್ಯವಾಗುವ ತಾಣವಾಗಿ ಹೊರಹೊಮ್ಮಬಹುದು.
ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ರಕ್ಷಣೆ, ತಂತ್ರಜ್ಞಾನ ಹಾಗೂ ದ್ವಿಪಕ್ಷೀಯ ವ್ಯಾಪಾರ ಸಂಬAಧ ಬಲಪಡಿಸಲು ಒತ್ತು ನೀಡಿದ್ದ ಟ್ರಂಪ್ ಈ ಬಾರಿ ಭಾರತದೊಂದಿಗೆ ಭೌಗೋಳಿಕ ರಾಜಕೀಯಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಎರಡನೇ ಅವಧಿಯಲ್ಲಿ ಕಾರ್ಪೋರೇಟ್ ತೆರಿಗೆ ದರವನ್ನು ಶೇ.21ರಿಂದ 15ಕ್ಕೆ ಇಳಿಸುವ ಟ್ರಂಪ್ ಅವರ ಉದ್ದೇಶಿತ ಯೋಜನೆಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ಸ್ನೇಹಿ ವಾತಾವರಣ ಸೃಷ್ಟಿಸಬಹುದು.


