Thursday, November 5, 2026
Homeರಾಜ್ಯಮೈಸೂರು : ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್,ಯಶವಂತಪುರ–ಮಡಗಾಂವ್–ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ..!

ಮೈಸೂರು : ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್,ಯಶವಂತಪುರ–ಮಡಗಾಂವ್–ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ..!

ಮೈಸೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಯಶವಂತಪುರ–ಮಡಗಾಂವ್ ಹಾಗೂ ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಪ್ರತಿ ಮಾರ್ಗದಲ್ಲಿ ತಲಾ ಒಂದು ಟ್ರಿಪ್ ಸಂಚರಿಸಲಿದ್ದು, ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.

ರೈಲು ಸಂಚಾರದ ವೇಳಾಪಟ್ಟಿ:

ರೈಲು ಸಂಖ್ಯೆ 06591: ಯಶವಂತಪುರ–ಮಡಗಾಂವ್

  • ನವೆಂಬರ್ 6, ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ನಿರ್ಗಮನ.
  • ನವೆಂಬರ್ 7, ಶನಿವಾರ ಸಂಜೆ 6:10ಕ್ಕೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ 06592: ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್
  • ನವೆಂಬರ್ 8, ಭಾನುವಾರ ಬೆಳಗ್ಗೆ 11:00ಕ್ಕೆ ಮಡಗಾಂವ್‌ನಿಂದ ನಿರ್ಗಮನ.
  • ನವೆಂಬರ್ 9, ಸೋಮವಾರ ಬೆಳಗ್ಗೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಕರಾವಳಿಯ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ:

ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಹಾಗೂ ಕಣಕೋಣ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.

ಬೆಂಗಳೂರು ಪ್ರಯಾಣಿಕರಿಗೆ ವಿಶೇಷ ಮಾಹಿತಿ:

ಮಡಗಾಂವ್‌ನಿಂದ ಬೆಂಗಳೂರಿಗೆ ಮರಳುವ ರೈಲು ಸಂಖ್ಯೆ 06592 ಯಶವಂತಪುರದಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಬದಲಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.

19 ಬೋಗಿಗಳ ವ್ಯವಸ್ಥೆ:

ಈ ವಿಶೇಷ ರೈಲಿನಲ್ಲಿ ಎಸಿ, ಸ್ಲೀಪರ್, ಜನರಲ್ ಕ್ಲಾಸ್ ಬೋಗಿಗಳ ಜೊತೆಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗಚೇತನ ಪ್ರಯಾಣಿಕರಿಗಾಗಿ ಮೀಸಲಾದ ಬೋಗಿಯ ವ್ಯವಸ್ಥೆಯೂ ಇರಲಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು, ಮಂಗಳೂರು ಹಾಗೂ ಕರಾವಳಿ ಭಾಗಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ವಿಶೇಷ ರೈಲು ಸೇವೆ ಅನುಕೂಲವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular