ಮೈಸೂರು ; ಏ.30 ರಂದು ಗದಗ ಜಿಲ್ಲೆಯ ಲಕ್ಷ್ಮೆಶ್ವರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ರವರ ಸಮಾವೇಶದಲ್ಲಿ ತಂಪು ಪಾನಿಯದ ವಾಹನದ ಮೇಲೆ ಜನರು ಮುಗಿಬಿದ್ದಿದ್ದು ತಂಪು ಪಾನಿಯವನ್ನು ಕುಡಿದು ಭಾರೀ ನಷ್ಟ ಅನುಭವಿಸಿದ್ದ ಸಮೀರ್ ಹಸನ್ ಸಾಬ್ ಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ತನ್ನ ನಷ್ಟದ ಹಣವನ್ನು ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸಮಾವೇಶದ ವೇಳೆ ಜನರು ಉಚಿತವಾಗಿ ಕೂಲ್ ಡ್ರಿಂಕ್ಸ್ ನೀಡುತ್ತಿದ್ದಾರೆ ಎಂದು ತಿಳಿದು ಸಮೀರ್ ಸಾಬ್ ವಾಹನದಲ್ಲಿದ್ದ ತಂಪು ಪಾನಿಯವನ್ನು ಕುಡಿದು ಕಾಲಿ ಮಾಡಿದ್ದರು.ಇದರಿಂದ ಸಮೀರ್ ಹಸನ್ ಸಾಬ್ ಗೆ 35000 ಸಾವಿರ ರೂಪಾಯಿ ನಷ್ಟವಾಗಿದೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿತ್ತು.ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವು ವ್ಯಕ್ತ ವಾಗಿತ್ತು.ಇದನ್ನು ನೋಡಿದ ಸಂಸದ ಪ್ರತಾಪ್ ಸಿಂಹ ಆನ್ ಲೈನ್ ಮೂಲಕ 35000 ಸಾವಿರ ರೂಪಾಯಿ ಹಸನ್ ಸಾಬ್ ಖಾತೆ ಗೆ ವರ್ಗಾಯಿಸಿ ಮಾನವೀಯತೆ ಮೆರೆದಿದ್ದಾರೆ. ಈಮೂಲಕ ಟ್ವಿಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಸಮೀರ್ ಹಸನ್ ಗೆ ಹಣ ಕಳುಹಿಸಿದ್ದೆನೆ ,ಸಾರಿ ಬ್ರದರ್ ಧನ್ಯವಾದಗಳು ಎಂದು ವಿವರಿಸಿದ್ದಾರೆ.ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.