Sunday, July 26, 2026
Homeಜಿಲ್ಲೆಮುಲ್ಕಿ : ಮಂಗಳೂರು -ಮುಲ್ಕಿ ಹೆದ್ದಾರಿಯಲ್ಲಿ ಕಾರು – ಬೈಕ್‌ ಡಿಕ್ಕಿ ; ಸಹಸವಾರೆ ಸಾವು.

ಮುಲ್ಕಿ : ಮಂಗಳೂರು -ಮುಲ್ಕಿ ಹೆದ್ದಾರಿಯಲ್ಲಿ ಕಾರು – ಬೈಕ್‌ ಡಿಕ್ಕಿ ; ಸಹಸವಾರೆ ಸಾವು.

ಮುಲ್ಕಿ : ಕೆಲಸ ಬಿಟ್ಟು ಮುಲ್ಕಿಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಸವಾರೆ ಮೃತಪಟ್ಟ ಘಟನೆ ಬಿಲ್ಲವ ಸಮಾಜ ಸೇವಾ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರು ಖಾಸಗಿ ಬ್ಯಾಂಕ್ ಉದ್ಯೋಗಿ ಬಾಕ್ರಬೈಲಿನ ಪ್ರೀತಿಕಾ ಶೆಟ್ಟಿ ( 21) ಎಂದು ತಿಳಿದಿದೆ.

ಉಡುಪಿಯಿಂದ ಮಂಗಳೂರಿನತ್ತ ಬೈಕ್‌ನಲ್ಲಿ ಬಾಳೆಪುಣಿಯ ನಿವಾಸಿ ಮನ್ವಿತ್‌ರಾಜ್‌ ಶೆಟ್ಟಿ ಹಾಗೂ ಪ್ರೀತಿಕಾ ಶೆಟ್ಟಿ ಚಲಿಸುತ್ತಿದ್ದ ವೇಳೆ ಕಾರ್ನಾಡಿನಿಂದ ಬಂದು ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಕಾರು ಡಿಕ್ಕಿ ಹೊಡೆದ. ಪರಿಣಾಮ ಬೈಕ್‌ನ ಹಿಂಬದಿಯಲ್ಲಿದ್ದ ಪ್ರೀತಿಕಾ ಸಾವನಪ್ಪಿದ್ದಾರೆ.ಅತಿಯಾದ ವೇಗ ಇರುವುದರಿಂದ ಕಾರು ಡಿಕ್ಕಿ ಹೊಡೆದ ತತ್‌ಕ್ಷಣ ಪ್ರೀತಿಕಾ ಒಂದಷ್ಟು ದೂರಕ್ಕೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುರತ್ಕಲ್‌ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular