ಮುಂಬೈ : ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ತಿಳಿಸಿದೆ. ಅವರಿಗೆ 73 ವರ್ಷ. ಜಾಕಿರ್ ಹುಸೇನ್ ಅವರು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿದ್ದ ಅವರನ್ನು ಸ್ಥಿತಿ ಹದಗೆಟ್ಟ ನಂತರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು ಎಂದು ಹುಸೇನ್ ಅವರ ಸಹೋದರಿ ಖುರ್ಷಿದ್ ಔಲಿಯಾ ರವರು ತಿಳಿಸಿದ್ದಾರೆ.
ಜಾಕಿರ್ ಹುಸೇನ್ ಅವರು ಹುಟ್ಟಿದ್ದು 1951ರಲ್ಲಿ. ಉಸ್ತಾದ್ ಅಲ್ಲಾ ರಖಾ ಅವರ ಮಗನಾಗಿ ಜಾಕಿರ್ ಜನಿಸಿದರು. 12ನೇ ವಯಸ್ಸಿಗೆ ಅವರು ಸಾರ್ವಜನಿಕವಾಗಿ ಪರ್ಫಾರ್ಮೆನ್ಸ್ ನೀಡಿದರು. ಅವರಿಗೆ ವಿದೇಶದಲ್ಲೂ ಪರ್ಫಾರ್ಮೆನ್ಸ್ ಮಾಡುವ ಅವಕಾಶ ಸಿಕ್ಕಿತ್ತು. ವಿದೇಶದಲ್ಲಿ ಅವರು ನೀಡಿದ ಮೊದಲ ಪರ್ಫಾರ್ಮೆನ್ಸ್ಗೆ ಸಿಕ್ಕ ಸಂಭಾವನೆ ಕೇವಲ 5 ರೂಪಾಯಿ. ಆದರೆ, ವರ್ಷಗಳು ಕಳೆದಂತೆ ಅವರು ಮಿಂಚಿದರು.
1998ರಲ್ಲಿ ಜಾಕಿರ್ ಹುಸೇಸ್ ಅವರಿಗೆ ಪದ್ಮಶ್ರೀ ಸಿಕ್ಕರೆ, 2002ರಲ್ಲಿ ಪದ್ಮ ಭೂಷಣ ಅವಾರ್ಡ್ ದೊರೆಯಿತು. ಅವರು ಗ್ರ್ಯಾಮಿ ಅವಾರ್ಡ್ ಕೂಡ ಗೆದ್ದಿದ್ದಾರೆ. ಜಾಕಿರ್ ಹುಸೇನ್ ಅವರು ಪ್ರತಿ ಕಾರ್ಯಕ್ರಮಕ್ಕೆ 5ರಿಂದ 10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಅವರು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ದೊಡ್ಡ ಶಿಷ್ಯ ವರ್ಗವನ್ನು ಅವರು ಹೊಂದಿದ್ದಾರೆ.ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ .