ಮಂಗಳೂರು ; ಸಾಮಾಜಿಕ ಜಾಲತಾಣದ ಊಹ ಪೋಹಗಳಿಂದ ಖ್ಯಾತ ಕಾಮಿಡಿ ಕಿಂಗ್ ಅರವಿಂದ ಬೋಳಾರ್ ರವರು ಗಂಭೀರ ಸ್ಥಿತಿಯಲ್ಲಿ ಇದ್ದರೆಂದು ಪ್ರಚಾರ ವಾಗುತ್ತಿರುವ ಸಂದರ್ಭದಲ್ಲಿ ಸ್ವತಃ ಅವರೇ ನಾನು ಆರೋಗ್ಯ ವಾಗಿದ್ದೆನೆಂದು ಹೇಳಿದ್ದಾರೆ.
ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೊಳಗಾದ ಘಟನೆ ಮಂಗಳೂರು ಪಂಪ್‌ವೆಲ್ ಬಳಿ ಜ.30 ರಂದು ಸಂಭವಿಸಿದೆ ಎಲ್ಲಾ ಸಾಮಾಜಿಕ ಜಾಲತಾಣದ ಲ್ಲಿ ವೈರಲ್ ಆಗಿತ್ತು .
ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತಕ್ಕೊಳಗಾಗಿದೆ. ಚಿಕಿತ್ಸೆಗಾಗಿ ಎನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಪರೇಷನ್ ನಡೆಸುವ ಸಾಧ್ಯತೆಯಿದೆ ಎಂದು ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರವಾದ ಕಾರಣ ಸ್ವತಃ ಅರವಿಂದ್ ಬೋಳಾರ್ ಅವರೇ ಮಾತನಾಡಿ ನಾನು ಈಗ ಕ್ಷೇಮವಾಗಿದ್ದೆನೆ ಸಣ್ಣ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವ ಕಾರಣ 10 ದಿನದ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ ,ಆದರಿಂದ ಯಾರು ಭಯಪಡುವ ಅವಶ್ಯ ವಿಲ್ಲ ಎಂದು ಹೇಳಿದ್ದಾರೆ.ಜೀವ ಉಳಿಯಲು ಹೆಲ್ಮೆಟ್ ಕಾರಣ ಹಾಗೂ ತಮ್ಮ ಸುರಕ್ಷತೆಗಾಗಿ ಎಲ್ಲರೂ ಹೆಲ್ಮೆಟ್ ಧರಿಸಬೇಕಾಗಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಚಾರಿ ವಿಭಾಗದ ಡಿ.ಸಿ.ಪಿ , ಹಾಗೂ ವಾಲ್ಟರ್ ನಂದಲೀಕೆ ಉಪಸ್ಥತರಿದ್ದರು.