ಮಂಗಳೂರು : ಕಳೆದ ಮೂರು ದಿನಗಳಿಂದ ನಿರಂತರ ಬಿಸಿಲ ತಾಪಮಾನದಿಂದ ಶಿವಾರು ರಕ್ಷಿತಾರಣ್ಯದ ಹಳೆನೇರಂಕಿ ಭಾಗದಲ್ಲಿ ಭಾರಿ ಬೆಂಕಿ ಕಂಡುಬಂದಿದೆ ಇದರಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮರಗಳು ನಾಶವಾಗಿದೆ.
ನಿಯಂತ್ರಣಕ್ಕೆ ಬಾರದ ಮಟ್ಟದಲ್ಲಿ ಬೆಂಕಿ ಹಬ್ಬಿದ್ದು ಅಗ್ನಿಶಾಮಕ, ಅರಣ್ಯ ಇಲಾಖೆ ಮತ್ತು ಸ್ಥಳೀಯರಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಅರಣ್ಯ ಮಧ್ಯದಲ್ಲಿ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾಗಿದ್ದು
ಕಾಳ್ಗಿಚ್ಚು ಅರಣ್ಯ ಸಮೀಪದ ಮನೆಗಳಿಗೂ ಹಾನಿ ಮಾಡುವ ಆತಂಕ ಸೃಷ್ಟಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿವಾರು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.