Monday, November 2, 2026
Homeಜಿಲ್ಲೆಮಂಗಳೂರು : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ನೂತನ ಎಸ್‌ಐಟಿ ಮುಖ್ಯಸ್ಥ ಚೇತನ್...

ಮಂಗಳೂರು : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ನೂತನ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಠೋಡ್ ಆಗಮನ…!

ಮಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ನೂತನ ಎಸ್‌ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಚೇತನ್ ಸಿಂಗ್ ರಾಠೋಡ್ ಅವರು ಇಂದು ಮಂಗಳೂರಿನ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.ಇಂದಿನಿಂದ ಪ್ರಕರಣದ ತನಿಖೆಯ ಸಾರಥ್ಯವನ್ನು ಚೇತನ್ ಸಿಂಗ್ ರಾಠೋಡ್ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಪ್ರಗತಿ ಹಾಗೂ ಈವರೆಗೆ ನಡೆದಿರುವ ಪ್ರಮುಖ ಬೆಳವಣಿಗೆಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆಯಲು ಸಭೆ ನಡೆಸಿದರು. ಎಸ್‌ಐಟಿ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್ ಹಾಗೂ ಲೋಕೇಶ್ ಜಗಲಸಾರ್ ಅವರೊಂದಿಗೆ ರಾಠೋಡ್ ಸಭೆ ನಡೆಸಿ ತನಿಖೆಯ ವಿವರಗಳನ್ನು ಪಡೆದುಕೊಂಡರು.

ಸಭೆಯ ಬಳಿಕ ಸೌಜನ್ಯ ಅವರ ಪೋಷಕರ ವಿಚಾರಣೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಹಾಗೂ ಮಾವ ವಿಠಲ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ನೂತನ ಎಸ್‌ಐಟಿ ಮುಖ್ಯಸ್ಥರ ನೇತೃತ್ವದಲ್ಲಿ ಮರುತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular