ಮಂಗಳೂರು ; ಅವೈಜ್ನಾನಿಕ ಸಿಗ್ನಲ್ ಹಾಗೂ ರಸ್ತೆಯಿಂದ ಮಂಗಳೂರು ನಗರದ ನಂತೂರಿನಲ್ಲಿ ಅಪಘಾತ ದಿನೇ ದಿನೇ ಹೆಚ್ಚುತ್ತಲೇ ಇದೆ.ಇಂದು ಮಧ್ಯಾಹ್ನ ಬೀಕರ ಅಪಘಾತ ನಡೆದಿದ್ದು ದ್ವಿಚಕ್ರ ವಾಹನ ಸವಾರರು ಇಬ್ಬರು ಸ್ಥಳದಲ್ಲೇ ಮೃತಪಟ್ಡಿದ್ದಾರೆ.
ಮೃತರನ್ನು ಸ್ಯಾಮ್ಯುಯೆಲ್ ಜೇಸುದಾಸ್ (66) ಮತ್ತು ಅವರ ಸಂಬಂಧಿ ಭೂಮಿಕಾ (17) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಟ್ರಕ್‌ನ ಚಾಲಕ ಸತೀಶ್ ಗೌಡ ಅವರು ಪಂಪ್‌ವೆಲ್‌ನಿಂದ ನಂತೂರು ವೃತ್ತದ ಜಂಕ್ಷನ್‌ಗೆ ಬರುತ್ತಿದ್ದಾಗ ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸುತ್ತಿದ್ದಾಗ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ.
ಲಾರಿಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದ್ದು ಸ್ಥಳೀಯರು ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದಾರೆ,ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೋಲಿಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.