Thursday, July 23, 2026
Homeಜಿಲ್ಲೆಮಂಗಳೂರು : ಶ್ರೀನಿವಾಸ್ ಯೂನಿವರ್ಸಿಟಿಯಲ್ಲಿ ತಾಂತ್ರಿಕ ಕ್ರಾಂತಿ: ಎಐ ಸ್ವಯಂಚಾಲಿತ ಇ-ವಾಹನ, ‘ಶ್ರೀನಿಬೋಟ್’ ಹಾಗೂ ಖನಿಜ...

ಮಂಗಳೂರು : ಶ್ರೀನಿವಾಸ್ ಯೂನಿವರ್ಸಿಟಿಯಲ್ಲಿ ತಾಂತ್ರಿಕ ಕ್ರಾಂತಿ: ಎಐ ಸ್ವಯಂಚಾಲಿತ ಇ-ವಾಹನ, ‘ಶ್ರೀನಿಬೋಟ್’ ಹಾಗೂ ಖನಿಜ ಅನ್ವೇಷಣಾ ಡ್ರೋನ್ ಅನಾವರಣ.

ಮಂಗಳೂರು : ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆಗೆ ಹೊಸ ಮೈಲುಗಲ್ಲು ನಿರ್ಮಾಣವಾಗಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ, ‘ಶ್ರೀನಿಬೋಟ್’ ಎಐ ರಿಸೆಪ್ಷನ್ ರೋಬೋಟ್ ಹಾಗೂ ಖನಿಜ ಅನ್ವೇಷಣಾ ಡ್ರೋನ್‌ಗಳನ್ನು ಗುರುವಾರ ಮುಕ್ಕ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

Oplus_131072
Oplus_131072

ವಿಶ್ವವಿದ್ಯಾಲಯದ ಆರ್ಥಿಕ ಸಹಕಾರ ಮತ್ತು ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಮೂರು ನವೀನ ತಂತ್ರಜ್ಞಾನ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದು, ಸಂಶೋಧನೆ, ನವೋದ್ಯಮ ಹಾಗೂ ಉದ್ಯಮಾಭಿಮುಖ ಶಿಕ್ಷಣಕ್ಕೆ ವಿಶ್ವವಿದ್ಯಾಲಯ ನೀಡುತ್ತಿರುವ ಆದ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ ಲಿಡಾರ್, ಎಐ ವಿಷನ್, ಜಿಪಿಎಸ್ ನ್ಯಾವಿಗೇಶನ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಅಳವಡಿಸಲಾಗಿದ್ದು, ಪೂರ್ವನಿರ್ಧರಿತ ಮಾರ್ಗದಲ್ಲಿ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆರು ಆಸನಗಳ ಈ ವಾಹನವನ್ನು ಆಸ್ಪತ್ರೆಗಳಲ್ಲಿ ರೋಗಿಗಳ ಸಾಗಣೆ, ಕೈಗಾರಿಕೆಗಳು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ವಿಶ್ವವಿದ್ಯಾಲಯಕ್ಕಾಗಿ ವಿಶೇಷವಾಗಿ ರೂಪಿಸಿರುವ ‘ಶ್ರೀನಿಬೋಟ್’ ಎಐ ಆಧಾರಿತ ರಿಸೆಪ್ಷನ್ ರೋಬೋಟ್ ಆಗಿದ್ದು, ಸಂದರ್ಶಕರನ್ನು ಸ್ವಾಗತಿಸುವುದು, ಧ್ವನಿ ಸಂವಾದದ ಮೂಲಕ ಮಾಹಿತಿ ನೀಡುವುದು, ಬಹುಭಾಷಾ ಬೆಂಬಲ, ಮುಖ ಗುರುತಿಸುವಿಕೆ ಹಾಗೂ ಟಚ್‌ಸ್ಕ್ರೀನ್ ಸೇವೆ ಸೇರಿದಂತೆ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದೇ ವೇಳೆ, ಖನಿಜ ಅನ್ವೇಷಣಾ ಡ್ರೋನ್ ಮೂಲಕ ಭೂವೈಜ್ಞಾನಿಕ ಸಮೀಕ್ಷೆ, ಖನಿಜ ನಿಕ್ಷೇಪಗಳ ಪತ್ತೆ, ಕಾಂತೀಯ ಅಸಾಮಾನ್ಯತೆಗಳ ವಿಶ್ಲೇಷಣೆ ಹಾಗೂ ಪರಿಸರ ಸ್ನೇಹಿ ಸಮೀಕ್ಷೆಗಳನ್ನು ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಾಗಿದೆ.

ಕಾರ್ಯಕ್ರಮದ ಬಗ್ಗೆ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಮಾತನಾಡಿದ್ದು ಸಂಶೋಧನಾ ಯೋಜನೆಗಳ ಕಾರ್ಯವೈಖರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಇದೊಂದು ಹೆಮ್ಮೆಯ ವಿಚಾರ ಈ ಅನ್ವೇಷಣೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಬ್ರಿವೃದ್ಧಿ ಪಡಿಸಿ ಕಾರ್ಯರೂಪಕ್ಕೆ ತರಲು ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಈ ವೇಳೆ ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್, ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣ ಎನ್. ಹೆಗಡೆ, ಸಂಶೋಧನಾ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ. ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular