ಮಂಗಳೂರು : ಮಹಿಳೆಯ ಸರ ಕದ್ದು ಕಾಂಪೌಂಡ್ ಹಾರಿ ಕಳ್ಳ ಎಸ್ಕೇಪ್ ಆದ ಘಟನೆ ಮಂಗಳೂರು ಹೊರ ವಲಯದ ಕೊಂಚಾಡಿ ಕೊಪ್ಪಲಕಾಡಿನಲ್ಲಿ
ನಡೆದಿದೆ
ಸರಕಳ್ಳತನ ಮಾಡಿ ಓಡಿ ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ರತ್ನಾವತಿ ಅವರಿಗೆ ಸೇರಿದ ಸುಮಾರು 3 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳ ಕದ್ದಿದ್ದಾನೆ. ಮಹಿಳೆ ಅಂಗಡಿಯಿಂದ ಮನೆಗೆ ಹೋಗುತ್ತಿರುವಾಗ ಈ ನಡೆದ ಘಟನೆ ನಡೆದಿದ್ದು ಜನ ಬೆನ್ನಟ್ಟಿದಾಗ ಕಳ್ಳ ಹೋಡಿಹೋಗಿದ್ದಾನೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


