Saturday, November 28, 2026
Homeಜಿಲ್ಲೆಮಂಗಳೂರು : ಮದ್ಯದ ಅಮಲಿನಲ್ಲಿ ನಿಂತಿದ್ದ ಆಲ್ಟೋ ಕಾರಿಗೆ ಫಾರ್ಚುನರ್ ಕಾರು ಡಿಕ್ಕಿ,ಆಲ್ಟೋ ಕಾರು...

ಮಂಗಳೂರು : ಮದ್ಯದ ಅಮಲಿನಲ್ಲಿ ನಿಂತಿದ್ದ ಆಲ್ಟೋ ಕಾರಿಗೆ ಫಾರ್ಚುನರ್ ಕಾರು ಡಿಕ್ಕಿ,ಆಲ್ಟೋ ಕಾರು ಚಾಲಕ ಸಾವು ; ಶಾಲೆಯ ತಡೆಗೋಡೆ ಧ್ವಂಸ – ಪರಾರಿಯಾದ ಚಾಲಕನನ್ನು ಕರೆದೊಯ್ದವರಿಗೂ ಪೊಲೀಸ್ ಆಯುಕ್ತರ ಎಚ್ಚರಿಕೆ!

ಮಂಗಳೂರು : ಫಾರ್ಚುನರ್ ಕಾರು ಹಾಗೂ ಆಲ್ಟೋ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.

ಫಾರ್ಚುನರ್ ಕಾರಿನ ಚಾಲಕ ಮದ್ಯಪಾನ ಮಾಡಿ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಪಘಾತದ ಬಳಿಕ ಚಾಲಕನನ್ನು ಘಟನಾ ಸ್ಥಳದಿಂದ ಯಾರೋ ಕರೆದೊಯ್ದಿದ್ದಾರೆ ಎನ್ನಲಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಪ್ರಯತ್ನಿಸಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ.

ಮೂಲಗಳ ಪ್ರಕಾರ ಫಾರ್ಚುನರ್ ಮಂಗಳೂರಿನ ಖ್ಯಾತ ಉದ್ಯಮಿಗೆ ಸೇರಿದ್ದು ಕುಡಿದ ನಶೆಯಲ್ಲಿ ಕಾರು ಚಾಲನೆ ಮಾಡಿ ಅಪಘಾತ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.ಅಪಘಾತ ನಡೆಸಿ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದು ಚಾಲಕನಿಗೆ ಪರಾರಿಯಗಳು ಸಹಾಯಮಾಡಿದವರ ವಿರುದ್ಧ ಕ್ರಮ ವಹಿಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಉರ್ವಾ ಬಳಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಆಲ್ಟೊ ಕಾರಿನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿ ಎಸ್. ಬಿ ಐ ಬ್ಯಾಂಕ್ ಉದ್ಯೋಗಿ ಬೆಂಗಳೂರು ಮೂಲದವರೆಂದು ತಿಳಿದುಬಂದಿದೆ.ಗೆಳೆಯರ ಜೊತೆಗೆ ಬಂದಿದ್ದ ಸಂಧರ್ಭದಲ್ಲಿ ಇಬ್ಬರು ಬೇರೆ ಕಡೆಗೆ ಹೊರಟ ಕಾರಣ ಮೃತ ವ್ಯಕ್ತಿ ಕಾರಿನಲ್ಲಿ ಕುಳಿತುಕೊಂಡಿದ್ದರೆಂದು ಮಾಹಿತಿ ದೊರೆತಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೊಲೆಗೆ ಸಮನಲ್ಲದ ಅಪರಾಧಿಕ ನರಹತ್ಯೆ (Culpable Homicide Not Amounting to Murder) ಪ್ರಕರಣವಾಗಿ ಪರಿವರ್ತಿಸಲು ಸೂಚನೆ ನೀಡಲಾಗಿದೆ. ಈ ಅಪರಾಧಕ್ಕೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದೇ ವೇಳೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದನ್ನು ದೃಢಪಡಿಸಲು ಅಗತ್ಯವಿರುವ ರಕ್ತದ ಮಾದರಿ ಪರೀಕ್ಷೆಯಿಂದ ಚಾಲಕನನ್ನು ತಪ್ಪಿಸಲು ಯಾರೂ ಸಹಕರಿಸಬಾರದು ಎಂದು ಆತನನ್ನು ಸ್ಥಳದಿಂದ ಕರೆದೊಯ್ದವರಿಗೆ ಮನವಿ ಮಾಡಲಾಗಿದೆ.

ಅಲ್ಲದೆ, ಅಪಘಾತದ ಬಳಿಕ ಆರೋಪಿಗೆ ಆಶ್ರಯ ನೀಡುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವುದು ಕೂಡ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ತನಿಖೆಯಲ್ಲಿ ಲಭ್ಯವಾಗುವ ಸಾಕ್ಷ್ಯಾಧಾರಗಳು ಹಾಗೂ ಅಪರಾಧದ ಬಳಿಕ ಆರೋಪಿಗಳು ನಡೆದುಕೊಂಡ ರೀತಿಯನ್ನು ಆಧರಿಸಿ, ಚಾಲಕನಿಗೆ ಆಶ್ರಯ ನೀಡಿದವರು ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಸಹಕರಿಸಿದವರ ವಿರುದ್ಧವೂ ಸಂಬಂಧಿತ ಕಾನೂನು ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular