Saturday, September 19, 2026
Homeಜಿಲ್ಲೆಮಂಗಳೂರು : ಮಂಗಳೂರು ಬಂದರಿನಲ್ಲಿ ಡಿಕೆ ರೌಂಡ್ಸ್ : ಬೃಹತ್ ನವಿಲು ಮೀನು ಹಿಡಿದು ಸಂಭ್ರಮಿಸಿದ...

ಮಂಗಳೂರು : ಮಂಗಳೂರು ಬಂದರಿನಲ್ಲಿ ಡಿಕೆ ರೌಂಡ್ಸ್ : ಬೃಹತ್ ನವಿಲು ಮೀನು ಹಿಡಿದು ಸಂಭ್ರಮಿಸಿದ ಸಿಎಂ.

ಮಂಗಳೂರು : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಅಲ್ಲಿನ ಮೀನುಗಾರಿಕಾ ಚಟುವಟಿಕೆಗಳನ್ನು ಪರಿಶೀಲಿಸಿದರು.

ಬಂದರಿನಲ್ಲಿ ವಿವಿಧ ಜಾತಿಯ ಮೀನುಗಳನ್ನು ವೀಕ್ಷಿಸಿದ ಸಿಎಂ, ಮೀನುಗಾರರೊಂದಿಗೆ ಮಾತುಕತೆ ನಡೆಸಿ ಮೀನುಗಾರಿಕಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ವಿವಿಧ ಜಾತಿಯ ಮೀನುಗಳನ್ನು ಕಂಡು ಸಂತಸಪಟ್ಟ ಡಿಕೆ ಶಿವಕುಮಾರ್, ಬಂದರಿಗೆ ಬಂದಿದ್ದ ಬೃಹತ್ ನವಿಲು ಮೀನನ್ನು ಸ್ವತಃ ಹಿಡಿದು ಗಮನ ಸೆಳೆದರು.

ಮೀನು ಹಿಡಿದು ವೀಕ್ಷಿಸಿದ ಸಿಎಂ, ಮೀನುಗಾರರೊಂದಿಗೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದರು.ಮೀನುಗಾರಿಕಾ ಬಂದರಿನಲ್ಲಿನ ವ್ಯವಸ್ಥೆಗಳು, ಮೀನುಗಾರರ ಸಮಸ್ಯೆಗಳು ಹಾಗೂ ಬಂದರಿನ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular