Monday, February 23, 2026
Flats for sale
Homeಜಿಲ್ಲೆಮಂಗಳೂರು : ಮಂಗಳೂರಿನ ಖ್ಯಾತ ಪ್ರಸೂತಿ - ಸ್ರೀ ರೋಗ ತಜ್ಞೆ ಡಾ.ನಿಶಿತಾರಿಗೆ 'ಮಿಸೆಸ್ ಇಂಡಿಪೆಂಡೆಂಟ್...

ಮಂಗಳೂರು : ಮಂಗಳೂರಿನ ಖ್ಯಾತ ಪ್ರಸೂತಿ – ಸ್ರೀ ರೋಗ ತಜ್ಞೆ ಡಾ.ನಿಶಿತಾರಿಗೆ ‘ಮಿಸೆಸ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್’ ಕಿರೀಟ..!

ಮಂಗಳೂರು : ಮಂಗಳೂರಿನ ಖ್ಯಾತ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ|ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರು ಫೆ.೨೧ರಂದು ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ‘ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಪೇಜೆಂಟ್’ನಲ್ಲಿ ಮೊದಲ ರನ್ನರ್ ಅಪ್ ಆಗಿ ಮೂಡಿ ಬಂದಿದ್ದಾರೆ.

ವಿಶ್ವದ ಹದಿನೇಳಕ್ಕೂ ಅಽಕ ದೇಶಗಳ ಸ್ಪರ್ಧಿಗಳು ಕೊನೆಯ ಹಂತದ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಅವರಲ್ಲಿ ಡಾ|ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು ಮಿಸೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರಥಮ ಮಹಿಳೆಯಾಗಿದ್ದು, ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಸಬ್‌ಟೈಟಲ್‌ಗಳು ಕೂಡ ಇವರಿಗೆ ಒಲಿದಿದೆ.

‘ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಪೇಜೆಂಟ್’ನಲ್ಲಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ|ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರನ್ನು ಸ್ವಾಗತಿಸಲಾಯಿತು. ಬಳಿಕ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ಹಲವು ಫ್ಯಾಶನ್ ವಾಕ್ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಅವರು ಅನುಭವ ಹಂಚಿಕೊಂಡರು.

ಇವರು ೨೦೨೩ರಲ್ಲಿ ಡಾಕ್ಟರ್‍ಸ್ ಫ್ಯಾಷನ್ ರ್‍ಯಾಂಪ್ ವಿನ್ನರ್, ೨೦೨೪ರಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸೀಸನ್ ೫ರ ವಿನ್ನರ್, ಮಿಸೆಸ್ ಇಂಡಿಯಾ ಕರ್ನಾಟಕ ದಿವಾ ಹಾಗೂ ಮಿಸಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ೨೦೨೪ ಪ್ರಶಸ್ತಿಗೆ ಭಾಜನರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular