Wednesday, September 2, 2026
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ SIR ಎಡವಟ್ಟು : ಜೀವಂತ ವ್ಯಕ್ತಿಯನ್ನೇ ‘ಮೃತ’ ಎಂದು ಗುರುತಿಸಿದ ಚುನಾವಣಾ...

ಮಂಗಳೂರು : ಮಂಗಳೂರಿನಲ್ಲಿ SIR ಎಡವಟ್ಟು : ಜೀವಂತ ವ್ಯಕ್ತಿಯನ್ನೇ ‘ಮೃತ’ ಎಂದು ಗುರುತಿಸಿದ ಚುನಾವಣಾ ಆಯೋಗ..!

ಮಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮಂಗಳೂರಿನ 61 ವರ್ಷದ ನಿವಾಸಿಯೊಬ್ಬರನ್ನು ತಪ್ಪಾಗಿ ‘ಮೃತ’ ಎಂದು ಗುರುತಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರ ಹೆಸರು ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಕಾಣೆಯಾಗಿತ್ತು. ಬಳಿಕ ಪರಿಶೀಲಿಸಿದಾಗ ಅವರ ಹೆಸರನ್ನು Absent, Shifted, Duplicate, Dead and Others (ASDDO) ಪಟ್ಟಿಯಲ್ಲಿನ ‘Dead’ ವಿಭಾಗಕ್ಕೆ ಸೇರಿಸಿರುವುದು ಗೊತ್ತಾಗಿದೆ. ತಾವು ಜೀವಂತವಾಗಿರುವಾಗ ಯಾವುದೇ ದಾಖಲೆ ಅಥವಾ ಮರಣ ಪ್ರಮಾಣಪತ್ರವಿಲ್ಲದೆ ತಮ್ಮನ್ನು ‘ಮೃತ’ ಎಂದು ಹೇಗೆ ಗುರುತಿಸಲಾಗಿದೆ ಎಂದು ರೇಗೊ ಪ್ರಶ್ನಿಸಿದ್ದಾರೆ.

ತಪ್ಪಿನ ಕುರಿತು ಅವರು ಬೂತ್ ಮಟ್ಟದ ಅಧಿಕಾರಿ (BLO) ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿ (AERO) ಅವರನ್ನು ಸಂಪರ್ಕಿಸಿ ಹೆಸರು ಮರುಸೇರ್ಪಡೆಗೆ ಮನವಿ ಮಾಡಿದ್ದಾರೆ. ಈ ತಪ್ಪಿಗೆ ಡೇಟಾ ಎಂಟ್ರಿ ವೇಳೆ ಉಂಟಾದ ದೋಷ ಕಾರಣವಾಗಿರಬಹುದು ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ. ರೇಗೊ ಅವರು ಚುನಾವಣಾ ಆಯೋಗಕ್ಕೆ ಆನ್‌ಲೈನ್ ದೂರು ಸಲ್ಲಿಸಿದ್ದು, ಹೆಸರು ಮರುಸೇರ್ಪಡೆಗಾಗಿ Form 6 ಕೂಡ ಸಲ್ಲಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಹ ಜೀವಂತ ಮತದಾರರನ್ನು Form 6 ಮೂಲಕ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಜೀವಂತ ವ್ಯಕ್ತಿಯನ್ನೇ ಮತದಾರರ ಪಟ್ಟಿಯಲ್ಲಿ ‘ಮೃತ’ ಎಂದು ಗುರುತಿಸಿರುವ ಘಟನೆ SIR ಪ್ರಕ್ರಿಯೆಯಲ್ಲಿನ ಪರಿಶೀಲನಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular