ಮಂಗಳೂರು ; ಮಂಗಳೂರಿನ ಕೆ.ಎಸ್ ರಾವ್ ರೋಡ್ ನ ಕರುಣಾ ಲಾಡ್ಜ್ ನಲ್ಲಿ ಮೈಸೂರಿನ ವಿಜಯನಗರ ಮೂಲದ ಕುಟುಂಬ ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತರು ದೇವೇಂದ್ರ (48),ನಿರ್ಮಲಾ(48) ಚೈತ್ರಾ(09),ಚೈತನ್ಯ (09)ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಎಂದು ತಿಳಿದುಬಂದಿದೆ.
ಇಬ್ಬರು ಅವಳಿ ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿದ್ದಾರೆ.
ಸಾಲಬಾಧೆ,ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿದರೆಂದು ತಿಳಿದುಬಂದಿದೆ.
ಸಾಲಗಾರರ ಒತ್ತಡದಿಂದ ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಡೆತ್ ನೋಟ್ ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಬರೆದಿದ್ದಾರೆ.
ಮಾ. 27ರಂದು ರೂಂ ಬುಕ್ ಮಾಡಿದ್ದ ಕುಟುಂಬ,ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದರು .ಎರಡು ದಿನಕ್ಕಾಗಿ ರೂಂ ವಿಸ್ತರಣೆ ಮಾಡಿದ್ದರು.
ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು,ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಿದ್ದರು.
ಬೆಳಗ್ಗಿನ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬ಼ಂದಿದೆ