Saturday, January 31, 2026
Flats for sale
Homeಜಿಲ್ಲೆಮಂಗಳೂರು : ಫೆ.2ರಿಂದ 11ರವರೆಗೆ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ,ನಾಗಬನ, ರಾಜಗೋಪುರ...

ಮಂಗಳೂರು : ಫೆ.2ರಿಂದ 11ರವರೆಗೆ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ,ನಾಗಬನ, ರಾಜಗೋಪುರ ನಿರ್ಮಾಣ.

ಮಂಗಳೂರು : ನೀರುಮಾರ್ಗ ಗ್ರಾಮದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತಿಳಿಸಿದ್ದಾರೆ.

ಮಾಣೂರು ಕ್ಷೇತ್ರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಫೆ.2ರಂದು ಬೆಳಗ್ಗೆ 8.00ಕ್ಕೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ. ರಾತ್ರಿ 7.00ರಿಂದ : ಸ್ಥಳಿಯ ಪ್ರತಿಭೆಗಳಿಂದ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ. ಫೆ.3ರಂದು ಬೆಳಗ್ಗೆ 8.00ರಿಂದ ಮಹಾಮೃತ್ಯುಂಜಯ ಯಾಗ, ಸಂಜೆ 5.00ರಿಂದ ನಾಗಾಲಯ ವಸ್ತ್ವಾದಿ, ನಾಗ ಬಿಂಬಾಧಿವಾಸ, ಪ್ರೋಕ್ತಹೋಮ. ರಾತ್ರಿ 7.00ರಿಂದ ಕಲ್ಲಡ್ಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ. ಫೆ. 4ರಂದು ಬೆಳಗ್ಗೆ 8.00ರಿಂದ: ನವಗ್ರಹ ಶಾಂತಿ ಹೋಮ ಬಳಿಕ ನೂತನ ನಾಗಾಲಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ನಾಗದರ್ಶನ. 5.30ರಿಂದ : ಆಶ್ಲೇಷಾಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಶಯ್ಯಾಧಿವಾಸ, ಧ್ವಜಾಧಿವಾಸ, ಸಂಜೆ 5.35ರಿಂದ : ನಂದಗೋಕುಲ ಕಲಾ ಕೇಂದ್ರ ಭಟ್ರಕೋಡಿ ನೀರುಮಾರ್ಗ ಇವರಿಂದ ನೃತ್ಯ ವೈಭವ. ರಾತ್ರಿ 7.00ರಿಂದ : ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಶಿವಾಮೃತ ನಾಟ್ಯಾಲಯ ನೀರುಮಾರ್ಗ ಇವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ನಡೆಯಲಿದೆ ಎಂದರು.

ಸುಬ್ರಾಯ ದೇವರ ಪ್ರತಿಷ್ಠೆ: ಫೆ.5ರಂದು ಬೆಳಗ್ಗೆ 8.07ಕ್ಕೆ ಮಾಣೂರು ಸುಬ್ರಾಯ ದೇವರ ಪ್ರತಿಷ್ಠೆ, ಸಂಜೆ 5.30ರಿಂದ ಗಣಪತಿ, ಪಾರ್ವತಿ ಬಿಂಬ ಶಯ್ಯಧಿಯಾನ, ಧ್ವಜಕಲಶಾಭಿವಾಸ. ಸಂಜೆ 5.35ರಿಂದ ನೃತ್ಯ ಕಲಾ ಭಾರತಿ ಭಟ್ರಕೋಡಿ ಇವರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ. ರಾತ್ರಿ 7.00ರಿಂದ ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ದೇವಿದಾಸ ಯಕ್ಷಾರಧನ ಕಲಾ ಕೇಂದ್ರ ಉರ್ವ ಇವರಿಂದ ಯಕ್ಷಗಾನ: ಕುಮಾರ ವಿಜಯ ನಡೆಯಲಿದೆ ಎಂದರು.

ಫೆ. 6ರಂದು ಬೆಳಗ್ಗೆ 8.00ರಿಂದ ಶ್ರೀ ಗಣಪತಿ ದೇವರು, ಪಾರ್ವತಿ ದೇವಿ ಪ್ರತಿಷ್ಠೆ, ಚಂಡಿಕಾಹೋಮ, ಸಂಜೆ 5.30ರಿಂದ ಬಲಿಶಿಲಾ ಪ್ರತಿಷ್ಠೆ, ಧ್ವಜಕಲಶಾಭಿಷೇಕ. ಸಂಜೆ 5.35ರಿಂದ : ಕಲಾರಾಧನ ನೃತ್ಯ ಸಂಸ್ಥೆ ಹಳೆಯಂಗಡಿ ಇವರಿಂದ ನೃತ್ಯ ವೈಭವ. ರಾತ್ರಿ 7.00ರಿಂದ : ಸಭಾ ಕಾರ್ಯಕ್ರಮ. ಬಳಿಕ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯದ ನಾಟಕ ಪುದರ್ ದೀತಿಜಿ. ಫೆ.7ರಂದು ಬೆಳಗ್ಗೆ 8.00ರಿಂದ ಗಣಪತಿ, ಪಾರ್ವತಿ, ದೇವರ ಕಲಶಾಭಿಷೇಕ, ಮಧ್ಯಾಹ್ನ 2.00ರಿಂದ ಯಕ್ಷಗಾನ ತಾಳಮದ್ದಳೆ ಶ್ರೀನಿಕಾ ಕಲಾತಂಡ ಮಂಗಳೂರು ಪ್ರಸಂಗ : ಷಣ್ಮುಖ ವಿಜಯ. ಸಂಜೆ 5.30ರಿಂದ: ಬ್ರಹ್ಮಕಲಶಾಧಿವಾಸ, ಸಂಜೆ 5.30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ವೈವಿಧ್ಯ ನೃತ್ಯ ಪ್ರದರ್ಶನ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯಗಾಥೆ. ರಾತ್ರಿ 7.00ರಿಂದ : ಸಭಾ ಕಾರ್ಯಕ್ರಮ, ರಾತ್ರಿ 9.00ರಿಂದ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಭಕ್ತಿಗಾನ ಸಂಭ್ರಮ. ಫೆ.8ರಂದು ವೈಭವದ ಬ್ರಹ್ಮಕಲಶೋತ್ಸವ. ಫೆ.9ರಂದು ಮಧ್ಯಾಹ್ನ 12.00: ಮಾಣೂರು ರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಸಂಜೆ 5.30ರಿಂದ ಶ್ರೀ ದೇವರಿಗೆ ಹೂವಿನ ಪೂಜೆ, ದೊಡ್ಡ ರಂಗಪೂಜೆ, ಬಲಿ ಉತ್ಸವಾದಿಗಳು, ಗಜ ವಾಹನ ಸೇವೆ, ಪ್ರಥಮ ತೆಪ್ಪೋತ್ಸವ ಕೆರೆದೀಪೋತ್ಸವ, ಶಯನೋತ್ಸವ. ಫೆ.10ರಂದು ಬೆಳಗ್ಗೆ 9.00ರಿಂದ ಕವಾಟೋದ್ಘಾಟನೆ, ಅನ್ನಸಂತರ್ಪಣೆ. ಸಂಜೆ 5.30ರಿಂದ: ಹೂವಿನ ಪೂಜೆ, ಸರ್ಪ ವಾಹನ ಸೇವೆ ರಾತ್ರಿ ರಥೋತ್ಸವ, ಅವಭೃತ ಸ್ನಾನ, ದೈವ ದೇವರ ಭೇಟಿ, ಧ್ವಜಾವರೋಹಣ, ಮಂತ್ರಾಕ್ಷತೆ, ಶ್ರೀ ಮೈಸಂದಾಯ, ರಕ್ತೇಶ್ವರಿ ನೇಮೋತ್ಸವ. ಫೆ.11ರಂದು ಬೆಳಗ್ಗೆ ಸಂಪ್ರೋಕ್ಷಣೆ ಕಲಶ ನಡೆಯಲಿದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತನಾಡಿ, ಫೆ.1ರಂದು ಸಂಜೆ 3.00ರಿಂದ: ಸೀಮೆಗೆ ಸಂಬಂಧಪಟ್ಟ 7 ಗ್ರಾಮಗಳು ಹಾಗೂ ನಾನಾ ಕಡೆಯಿಂದ ಆಗಮಿಸಿದ ಹಸಿರು ಹೊರೆಕಾಣಿಕೆ ಮೆರವಣಿಗೆಯು ನೀರುಮಾರ್ಗ ಜಂಕ್ಷನ್ ನಿಂದ ಮಾಣೂರು ಕ್ಷೇತ್ರಕ್ಕೆ ಹೊರಡಲಿದೆ. ಈ ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು, ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಎಂದರು.

ಫೆ. 8ರಂದು ಬ್ರಹ್ಮಕಲಶ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ಭಟ್ ಬೊಳ್ಮಾರಗುತ್ತು ಮಾತನಾಡಿ, ಫೆ.8ರಂದು ಬೆಳಗ್ಗೆ 9.35ಕ್ಕೆ ಶ್ರೀ ಸುಬ್ರಾಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಂತರ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ ನೂತನ ಧ್ವಜಾರೋಹಣ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಮಧ್ಯಾಹ್ನ 1.00 ರಿಂದ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿಗಾನಾಮೃತ, ಸಂಜೆ 3.30ರಿಂದ ಕೀರ್ತನಾಮೃತ ನೃತ್ಯಕಲಾಭಾರತಿ ತಂಡ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿ. ಸಂಜೆ 5.00ರಿಂದ ಸಭಾ ಕಾರ್ಯಕ್ರಮ, ರಾತ್ರಿ 7.00ರಿಂದ ಹೂವಿನ ಪೂಜೆ, ಸಣ್ಣರಂಗ ಪೂಜೆ, ಪಲ್ಲಕ್ಕಿ ಸೇವೆ. ರಾತ್ರಿ 8.00ರಿಂದ ವಿಧಾತ್ರಿ ಕಲಾವಿದೆರ್ ಕುಡ್ಡ ಅಭಿನಯದ ನಾಟಕ ಜೈ ಹನುಮಾನ್ ಪ್ರದರ್ಶನವಾಗಲಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ್ ಕೆ., ಆನಂದ್ ಸರಿಪಲ್ಲ, ಪ್ರಧಾನ ಅರ್ಚಕರಾದ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಎನ್ ವಿಕೆ ಭಟ್ರಕೋಡಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular