ಮಂಗಳೂರು ; ಮಂಗಳೂರು ನಗರದ ಹೊರವಲಯದ ಮೂಡುಶೆಡ್ಡೆ ವ್ಯಾಪ್ತಿಯ ಎದುರುಪದವಿನಲ್ಲಿ ನೆರೆಮನೆಯವರಿಗೆ ಕೋವಿ ತೋರಿಸಿ ಬೆದರಿಕೆ ಹಾಕಿ ಧಮ್ಕಿ ನೀಡಿದ ಘಟನೆ ಗುರುವಾರ ನಡೆದಿದೆ.
ಆರೋಪಿ ಪಕ್ಕದ ಮನೆ ಯುವತಿಗೆ ಅವಾಚ್ಯವಾಗಿ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.
ಈ ಬಗ್ಗೆ ಬಗ್ಗೆ ಸ್ಥಳೀಯ ನಿವಾಸಿಗಳು ರಾಜೇಶ್ ರೈ ಮತ್ತು ಆತನ ಪತ್ನಿ ರಾಜೇಶ್ವರಿಯಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ಸ್ಥಳದಲ್ಲಿದ್ದವರಿಗೆ ಕೋವಿ ತೋರಿಸಿ ಬೆದರಿಕೆ ಹಾಕಿದ್ದು ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಹರಸಾಹಸ ಪಟ್ಟಿದ್ದಾರೆ.
ಪೋಲಿಸರ ಮೇಲೂ ಬಿಸಿ ನೀರು ಎರಚಿ ದಂಪತಿ ರಂಪಾಟ ಮಾಡಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜೇಶ್ ರೈ ದಂಪತಿಯಿಂದ ಕೋವಿ ತೋರಿಸಿ ಬೆದರಿಕೆ ಹಾಕಿದ್ದಾನೆ.
ಸ್ಥಳಕ್ಕೆ ಕಾವೂರು ಪೊಲೀಸರ ಭೇಟಿ ನೀಡಿದ್ದು, ರಾಜೇಶ್ ರೈ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.