ಮಂಗಳೂರು ; ಮಂಗಳೂರಿನ ಮಿಲಾಗ್ರಿಸ್ ಬಳಿ ಇರುವ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣದ ಆರೋಪಿಯ ಬಂಧನ ಕೇರಳದ ಕಾಸರಗೋಡಿನಲ್ಲಿ ತಿಂಗಳ ಬಳಿಕ ಬಂಧನವಾಗಿದೆ.
ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಎಂದು ತಿಳಿದು ಬಂದಿದೆ.
ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡದಿಂದ ಬಂಧವಾಗಿದೆ.
ಆರೋಪಿ ಶಿಫಾಸ್ ನನ್ನು ಮಂಗಳೂರು ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ.
ಆರೋಪಿ ಶಿಫಾಸ್ ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.
ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಫೆ.3ರಂದು ಕೊಲೆ ನಡೆದಿತ್ತು.
ಜ್ಯವೆಲ್ಲರಿ ಮಾಲಿಕ ಕೇಶವ ಆಚಾರ್ಯ ರವರು ಊಟಕ್ಕೆ ಹೋದ ಸಂದರ್ಭದಲ್ಲಿ ಅವರ ಸಿಬ್ಬಂದಿ ಅತ್ತಾವರ ನಿವಾಸಿ ಜ್ಯವೆಲರಿ ಸಿಬ್ಬಂದಿ ರಾಘವೇಂದ್ರ(50) ಬರ್ಬರವಾಗಿ ಹತ್ಯೆ ಮಾಡಿ ಪಾರಾರಿಯಾಗಿದ್ದನು.
ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣದ ಕಳವು ನಡೆದಿದೆ ಎಂದು ಪ್ರಕರಣ ದಾಖಲಾಗಿತ್ತು.