Thursday, July 23, 2026
Homeಜಿಲ್ಲೆಮಂಗಳೂರು : ಜೋಕಟ್ಟೆ ಬಳಿ ಗಾಳಿಮಳೆಗೆ ತಡೆಗೋಡೆ ಕುಸಿದು ಯುವಕ ಸಾವು.

ಮಂಗಳೂರು : ಜೋಕಟ್ಟೆ ಬಳಿ ಗಾಳಿಮಳೆಗೆ ತಡೆಗೋಡೆ ಕುಸಿದು ಯುವಕ ಸಾವು.

ಮಂಗಳೂರು : ರಾಜ್ಯದಲ್ಲಿ ಈ ಬಾರಿಯ ಮಳೆಗೆ ಹಲವು ಸಾವು ನೋವು ಸಂಭವಿಸಿದ್ದು ಹಲವು ಅಹಿತಕರ ಘಟನೆ ಸುದ್ದಿಯಾಗಿದೆ .ಆದರೆ ಮಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಮನೆಗೆ ಅತಿಥಿಯಾಗಿ ಬಂದಿದ್ದ ಬಾಲಕ ಯುವಕ ಮೃತಪಟ್ಟ ಘಟನೆ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ.

ಮೃತಪಟ್ಟ ಯುವಕನನ್ನು ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಮಂಗಳೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಗಾಳಿ-ಮಳೆಗೆ ಜೋಕಟ್ಟೆಯ ಮನೆಯೊಂದರ ಮೇಲೆ ತಡೆಗೋಡೆ ಕುಸಿದಿದೆ.ಮನೆಯ ಪಕ್ಕದ ತಡೆಗೋಡೆ ಕುಸಿದ ಕಾರಣ ಬಾಲಕ ಅದರಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular