ಮಂಗಳೂರು : ಖ್ಯಾತ ಯಕ್ಷಗಾನ ಮತ್ತು ತಾಳಮದ್ದಳೆ ಕಲಾವಿದ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಅವರು ಬುಧವಾರ ನಸುಕಿನಲ್ಲಿ ವಿಧಿವಶರಾಗಿದ್ದಾರೆ.ಅವರಿಗೆ 88 ವರ್ಷ.
ಕುಂಬ್ಳೆ ಸುಂದರ್ ರಾವ್ ಅವರು ತೆಂಕುತಿಟ್ಟು ಶೈಲಿಯ ಯಕ್ಷಗಾನದ ಪ್ರತಿಪಾದಕರಾಗಿದ್ದರು ಮತ್ತು 1994 ರಿಂದ 1999 ರವರೆಗೆ ಸುರತ್ಕಲ್ (ಈಗಿನ ಮಂಗಳೂರು ನಗರ ಉತ್ತರ) ಕ್ಷೇತ್ರದಲ್ಲಿ ಶಾಸಕರಾಗಿದ್ದರು.
ಕಲಾವಿದರಾಗಿ ಸುರತ್ಕಲ್ ಮತ್ತು ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.ವಿಭಿನ್ನ ಶೈಲಿಯ ಡೈಲಾಗ್ ಡೆಲಿವರಿಗೆ ಹೆಸರುವಾಸಿಯಾದ ಅವರು ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿದ್ದರು.
ಸುಂದರ್ ರಾವ್ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಸುಂದರ್ ರಾವ್ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಪಂಪ್‌ವೆಲ್ ಬಳಿಯ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.