Monday, March 17, 2025
Flats for sale
Homeಜಿಲ್ಲೆಮಂಗಳೂರು ; ಈ ಬಜೆಟ್ ಸರ್ವತೋಮುಖ ಅಭಿವೃದ್ಧಿ ಪೂರಕ ಬಜೆಟ್ ; ನಳೀನ್ ಕುಮಾರ್ ಕಟೀಲ್.

ಮಂಗಳೂರು ; ಈ ಬಜೆಟ್ ಸರ್ವತೋಮುಖ ಅಭಿವೃದ್ಧಿ ಪೂರಕ ಬಜೆಟ್ ; ನಳೀನ್ ಕುಮಾರ್ ಕಟೀಲ್.

ಮಂಗಳೂರು ; ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಇಂದು ಮಂಡಿಸಿದ ಬಜೆಟ್ ಕೃಷಿಕರು, ಮಹಿಳೆಯರು, ಮತ್ತು ಯುವಕರ ಪರವಾದ ಬಜೆಟ್ ಎಂದು ಹೇಳಿದ್ದಾರೆ.

ಈಗ ಮೂರು ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡನೆಯಾಗಿದೆ
ಇದು ಕೃಷಿಕನ ಕನಸಿನ ಬಜೆಟ್, ಕೃಷಿಕರ ಪರವಾದ ಬಜೆಟ್,ಐದು ಲಕ್ಷದವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣ,ಅಡಿಕೆ ರೋಗ ಸಂಶೋಧನೆಗೆ ಹತ್ತು ಕೋಟಿ ಬಿಡುಗಡೆ ಮಾಡಲಾಗಿದೆ.

ಕುಮ್ಕಿ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ,ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಪದವಿ ಪಡೆದವರಿಗೆ ಎರಡು ಸಾವಿರ ಕೊಡುವ ಯೋಜನೆ,ಹಳ್ಳಿಯ ಯುವಕರಿಗೆ ವಿವೇಕಾನಂದರ ಹೆಸರಿನಲ್ಲಿ ಸಾಲ ಯೋಜನೆ, ಸ್ವಯಂ ಉದ್ಯೋಗ ಅವಕಾಶ,ಭೂ ರಹಿತ ಮಹಿಳೆಯರಿಗೆ ಐನೂರು ರೂ., ಸ್ವಸಹಾಯ ಸಂಘಕ್ಕೆ ಸಾಲ ಯೋಜನೆ.

ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬುವ ಕೆಲಸ ಬಜೆಟ್ ನಲ್ಲಿ ಆಗಿದೆ,ಇದು ಜನಪರ ಮತ್ತು ಜನಸಾಮಾನ್ಯರ ಪರವಾದ ಬಜೆಟ್ ಆಗಿದೆ.

ವಸತಿ ಯೋಜನೆ, ಮನೆ ಇಲ್ಲದವರಿಗೆ ಮನೆ ಕೊಡುವ ಯೋಜನೆ ಇದೆ,ಶಿಕ್ಷಣ, ಉದ್ಯೋಗಕ್ಕೆ ಪೂರಕವಾದ ಎಲ್ಲಾ ಯೋಜನೆ,ಹಾಕಲಾಗಿದೆ,ಆರೋಗ್ಯದಲ್ಲಿ ಪರಿವರ್ತನೆ ತರೋ ಕೆಲಸ ಸರ್ಕಾರ ಮಾಡಿದೆ.

ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಮಂಡನೆ ಮಾಡಿದ್ದಾರೆ,ದ.ಕ ಜಿಲ್ಲೆಗೆ ಗುರುಪುರ ನೇತ್ರಾವತಿ ನದಿಗೆ ಬಾರ್ಜ್ ಜೋಡನೆ ಮಾಡಲಾಗಿದೆ

ಕಾಂಗ್ರೆಸ್ ಕಳೆದ ಎಪ್ಪತ್ತು ವರ್ಷಗಳಲ್ಲಿ ಹೂ ಇಟ್ಟೇ ದಿನ ದೂಡಿದ್ದಾರೆ,ಜನರಿಗೆ ಮಂಕುಬೂದಿ ಎರಚಿ ಮಂಗ ಮಾಡಿ ಜನರನ್ನ ವಂಚಿಸಿದ್ದಾರೆ,ಮುಂದೆಯೂ ಅವರು ಶಾಶ್ವತವಾಗಿ ಕಿವಿ ಮೇಲೆ ಹೂ ಇಟ್ಟುಕೊಂಡೇ ಇರಲಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular