Thursday, March 27, 2025
Flats for sale
Homeಜಿಲ್ಲೆಮಂಗಳೂರು : ಇಬ್ಬರ ಜಗಳದಲ್ಲಿ ನಿಂತುಹೋದ ವರ್ಷಾವಧಿ ಜಾತ್ರೆ,ನ್ಯಾಯಾಲಯ ಮೆಟ್ಟಿಲೇರಿದ ನಿರಂತ ಬೆಟ್ಟು ಕುಟುಂಬ ..!

ಮಂಗಳೂರು : ಇಬ್ಬರ ಜಗಳದಲ್ಲಿ ನಿಂತುಹೋದ ವರ್ಷಾವಧಿ ಜಾತ್ರೆ,ನ್ಯಾಯಾಲಯ ಮೆಟ್ಟಿಲೇರಿದ ನಿರಂತ ಬೆಟ್ಟು ಕುಟುಂಬ ..!

ಮಂಗಳೂರು : ಬಂಟ್ವಾಳ ತಾಲೂಕಿನ ಶಂಭೂರು ವೈಧ್ಯನಾಥ ದೈವಸ್ಥಾನದಲ್ಲಿ ಮಾರ್ಚ್ 9 ರಿಂದ 11 ರ ತನಕ ನಡೆಯಬೇಕಾಗಿದ್ದ ನೇಮೋತ್ಸವ ನಿಂತು ಹೋಗಿದ್ದು ನೇಮೋತ್ಸವ ನಡೆಸಲು ನ್ಯಾಯಾಲಯ ತಡೆಯಾಜ್ಞೆ ನೀಡಿದ ಕಾರಣದಿಂದ ನೇಮೋತ್ಸವ ನಿಲ್ಲಿಸಲಾಗಿದೆ. ದೇವಸ್ಥಾನವು ದಾರ್ಮಿಕ ದತ್ತಿಗೆ ಒಳಪಟ್ಟಿದ್ದರು, ಇದು ನಿರಂತ ಬೆಟ್ಟು ಮನೆತನದ ಸುಬ್ಬು ಸಂಸಾರಕ್ಕೆ ಸೇರಿದ ದೈವಸ್ಥಾನವಾಗಿದೆ. ನಿರಂತಬೆಟ್ಟು, ಭಾವ, ಬರ್ಕೆ, ಕೊಲ್ಲೂರು ಕುಟುಂಬಸ್ಥರು ಈ ದೈವಸ್ಥಾನದ ಮುಖ್ಯಸ್ಥರಾಗಿದ್ದಾರೆ. ಆದ್ರೆ ಈ ನಾಲ್ಕೂ ಕುಟುಂಬವನ್ನು ಹೊರಗಿಟ್ಟು ಕೆಲವರು ಕಳೆದ ಹತ್ತು ವರ್ಷಗಳಿಂದ ನೇಮಕ್ಕೆ ಅಡ್ಡಿ ಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಭಾರಿ ಅವರೇ ಮೊದಲಾಗಿ ನ್ಯಾಯಾಲಯ ಮೆಟ್ಟಿಲೇರಿದ್ದು, ದಾಖಲೆ ಸಮೇತವಾಗಿ ನಾಲ್ಕು ಕುಟುಂಬವರು ನ್ಯಾಯಾಲಯದಲ್ಲಿ ಮಂಡಿಸಿದ ವಾದವನ್ನು ನ್ಯಾಯಾಲಯ ಪುಸ್ಕರಿಸಿ ತಡೆಯಾಜ್ಞೆ ನೀಡಿದೆ. ಆದರೆ ಈ ಬಗ್ಗೆ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ನಿರಂತಬೆಟ್ಟು ಕುಟುಂಬದವರು ಭಂಡಾರ ನೀಡಿಲ್ಲ ಅಂತ ದೈವಸ್ಥಾನಕ್ಕೆ ಸೇರದ ಕೆಲವರು ಆರೋಪಿಸಿದ್ದಾರೆ ಅಂತ ನಾಲ್ಕೂ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಟುಂಬಸ್ಥರ ಪರವಾಗಿ ಕಾರ್ಪೋರೇಟರ್ ಕಿರಣ್ ಕೋಡಿಕಲ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular