ಮಂಗಳೂರು ; ನಗರದ ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ.
ವಿಜಯಾ(33), 4 ವರ್ಷದ ಮಗಳು ಶೋಭಿತಾ ಸಾವನಪ್ಪಿದ್ದಾರೆ.
12 ವರ್ಷದ ಯಜ್ಞಾ ಪವಾಡ ಸದೃಶ ನೇಣು ಕುಣಿಕೆಯಿಂದ ಪಾರಾಗಿದ್ದಾರೆ.
ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಮರು ಮದುವೆಯಾಗಿದ್ದ ವಿಜಯಾ ಎರಡನೇ ಪತಿ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು .ಇದರಿಂದ ನೊಂದಿದ್ದ ವಿಜಯಾ ಇಬ್ಬರು ಹೆಣ್ಮಕ್ಕಳೊಂದಿಗೆ ಆತ್ಮಹತ್ಯೆ ಯತ್ನಿಸಿದರು.
ಯಜ್ಞಾ ಕಾಲ ಬುಡದಲ್ಲಿ ಟೀಫಾಯಿ ಇದ್ದುದರಿಂದ ಜೀವ ರಕ್ಷಣೆಗಾಗಿ ಚೀರಾಟಮಾಡುತ್ತಿದ್ದ ಸಮಯದಲ್ಲಿ ಯಜ್ಞಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ತಾಯಿ ವಿಜಯಾ, ಮಗಳು ಶೋಭಿತಾ ಸಾವನಪ್ಪಿದ್ದಾರೆ.