ಬೆಳಗಾವಿ : `ಎರಡೂವರೆ ವರ್ಷ ಅಂತ ಎಲ್ಲೂ ಹೇಳಿಲ್ಲ. ಈಗ್ಲೂ ನಾನೇ ಸಿಎಂ, ಹೈಕಮಾಂಡ್ ನನ್ನ ಪರವಾಗೇ ಇರೋದು. ಮುಂದೆಯೂ ನಾನೇ ಇರ್ತೀನಿ’ ಹೀಗೆಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಬೆಳ ಗಾವಿಯಲ್ಲಿ ಪುನರುಚ್ಚರಿಸಿದ್ದಾರೆ. ಸಿಎಂ ಸ್ಥಾನದ ಅಧಿಕಾರ ಹಸ್ತಾಂತರದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ವಿಧಾನಸಭೆ ಹಾಗೂ ಪರಿಷತ್ ಕಲಾಪದಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳುವ ಮೂಲಕ ರಾಜಕೀಯ ಎದುರಾಳಿಗಳಿಗೆ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುತ್ತಿದ್ದ ವೇಳೆ ಅಸಮಾನತೆ ನಿವಾರಣೆಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇ ವೆಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ನೀವು ಬ್ರಹ್ಮನ ಬಳಿ ನಿಂತು ೫ ವರ್ಷದ ಸಿಎಂ ಎAದು ಬರೆಸಿಕೊಂಡು ಬಂದಿದ್ದೀರಿ ಈಗಲೂ ನಾನೇ ಸಿಎಂ, ಹೈಕಮಾಂಡ್ ತೀರ್ಮಾನದಲ್ಲೂ ನಾನೇ ಸಿಎಂ. ಎರಡೂವರೆ ವರ್ಷ ಅಂತ ಹೇಳಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ಸರ್, ನೀವು ಎರಡೂವರೆ ವರ್ಷ ಸಿಎಂ ಆಗಿರಲಿ ಅಂತ ನಾವು ಬಯಸ್ತಿಲ್ಲ. ಅದು ಹೈಕಮಾಂಡ್ ಮತ್ತು ನಿಮ್ಮ ಶಾಸಕರದ್ದೇ ಬಯಕೆ ಎಂದು ರೇಗಿಸಿದರು. ಉತ್ತರಕರ್ನಾಟಕಕ್ಕೆ ಘೋಷಿಸುವ ಯೋಜನೆಗಳ ಅನುಷ್ಠಾನಕ್ಕೂ ನೀವೇ ಸಿಎಂ ಆಗಿರಬೇಕು ಎಂದಾಗ, ನಾನೇ ಇದ್ದೀನಿ. ಮುಂದೆಯೂ ನಾನೇ ಇರ್ತೀನಿ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ಎಲ್ಲಾ ದಾಖಲೆ ಮುರಿತಿದೀರಿ? ಕುರ್ಚಿ ಭದ್ರಗೊಳಿಸಿಕೊಳ್ಳಲು ಯಾರನ್ನು ಮೇಲೆತ್ತಬೇಕು ಯಾರನ್ನು ತುಳಿಯಬೇಕು ಎಲ್ಲವೂ ನಿಮಗೆ ಗೊತ್ತಿದೆ ಎಂದರು. ತಕ್ಷಣ ಎದ್ದು ನಿಂತು ಪ್ರತಿಕ್ರಿಯಿಸಿದ ಸಿಎಂ, ಹಣೆಬರಹದಲ್ಲಿ ನನಗೆ ನಂಬಿಕೆ ಇಲ್ಲ. ರಾಜಕೀಯವಾಗಿ ನಾನಿನ್ನೂ ನಿಶಕ್ತಿ ಆಗಿಲ್ಲ. ಆದರೆ ದೈಹಿಕವಾಗಿ ಸ್ವಲೊ ನಿಶಕ್ತಿ ಆಗಿರಬಹುದಷ್ಟೇ ಎಂದು ತಿರುಗೇಟು ನೀಡಿದರು.
ನನ್ನ-ಸಿಎಂ ನಡುವೆ ಒಪ್ಪಂದ ಆಗಿದೆ:
ಕಾರವಾರದಲ್ಲಿ ಡಿಸಿಎಂಡಿಕೆ ಬಾಂಬ್ ನಮ್ಮಲ್ಲಿ ಒಪ್ಪಂದವಾಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ಹೈಕಮಾಂಡ್ ಸಿಎಂ ಪರವಾಗಿದ್ದಿದ್ದಕ್ಕೇ ಅವರು ಮುಖ್ಯಮಂತ್ರಿ ಯಾಗಿದ್ದಾರೆ' ಎಂದು ಡಿಸಿಎಂ ಡಿ.ಕೆ.ಶಿವ ಕುಮಾರ್ ಹೇಳಿದ್ದಾರೆ.ನಾನು ಯಾವತ್ತೂ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡಿದೆಯೋ ಅದರಂತೆ ಅವರು ಸಿಎಂ ಆಗಿದ್ದಾರೆ. ನಮ್ಮಿಬ್ಬರ ನಡುವೆ ಒಂದು ಒಪ್ಪಂದವಾಗಿದೆ, ಹೈಕಮಾಂಡ್ ಸಹ ನಮ್ಮನ್ನು ಆ ಒಪ್ಪಂದಕ್ಕೆ ತಂದಿದೆ. ಅದರAತೆ ನಾನು ನಡೆದುಕೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು
ಒಪ್ಪಂದ ಆಗ್ವಾಗ ನೀನಿದ್ದಾ?: ಮತ್ತೆ ಎದ್ದು ನಿಂತ ಅಶೋಕ್, ಎರಡೂವರೆ ವರ್ಷಕ್ಕೆ ನೀವು ಸಿಎಂ ಅಂತೆ. ಹಾಗಂತ ನಿಮ್ಮ ಹೈಕಮಾಂಡ್ ಬರೆದಿದೆಯಾ? ಅಥವಾ ತಪ್ಪಾಗಿದೆಯಾ? ಎಂದು ಕಾಲೆಳೆದರು. ಇದಕ್ಕೆ ಅಷ್ಟೇ ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಒಪ್ಪಂದ ಆಗ್ವಾಗ ನೀನಿದ್ದಾ? ಎಂದು ಏರುಧ್ವನಿಯಲ್ಲೇ ಪ್ರಶ್ನಿಸಿದರು. ಮುಂದುವರಿದು ಮಾತನಾಡಿ, ಏನಿಲ್ಲ. ನಾವು ಎಲ್ಲರೂ ಸರಿಯಾಗಿದೀವಿ. ನಮ್ಮದು ಹೈಕಮಾಂಡ್ ಪಾರ್ಟಿ, ಈಗ ನಾನೇ ಸಿಎಂ. ಹೈಕಮಾಂಡ್ ಕೂಡಾ ನನ್ನ ಪರವಾಗೇ ಇರೋದು. ಮೊದಲು ಜನರ ಆಶೀರ್ವಾದ ಸಿಗ್ಬೇಕು. ಬಳಿಕ ಶಾಸಕಾಂಗ ಸಭೆಯಲ್ಲಿ ಶಾಸಕರ ಆಯ್ಕೆ. ಆಮೇಲೆ ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಹೇಳಿದ ಹಾಗೆ ನಡ್ಕೊತೀನಿ ಎಂದರು.
ಈ ವೇಳೆ ಮತ್ತೆ ಎದ್ದು ನಿಂತ ವಿಪಕ್ಷ ಸದಸ್ಯರು, ಸರ್..ಈ ವಿಚಾರದಲ್ಲೇ ನಿಮಗೆ ಗೊಂದಲ ಇರೋದು ಎಂದು ಮತ್ತೆ ರೇಗಿಸಿದರು. ಮುಂದೆಯೂ ನಾನೇ ಸಿಎಂ ಆಗಿರ್ತೀನಿ: ಈಗಲೂ ನಾನೇ ಸಿಎಂ, ಹೈಕಮಾAಡ್ ತೀರ್ಮಾನದಲ್ಲೂ ನಾನೇ ಸಿಎಂ. ಎರಡೂವರೆ ವರ್ಷ ಅಂತ ಹೇಳಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ಸರ್.ನೀವು ಎರಡೂವರೆ ವರ್ಷ ಸಿಎಂ ಆಂತ ನಾವು ಬಯಸ್ತಿಲ್ಲ. ಹೈಕಮಾಂಡ್ ಮತ್ತು ನಿಮ್ಮ ಶಾಸಕರ ಬಯಕೆ ಎಂದು ರೇಗಿಸಿದರು. ಉತ್ತರಕರ್ನಾಟಕಕ್ಕೆ ಘೋಷಿಸುವ ಯೋಜನೆಗಳ ಅನುಷ್ಠಾನಕ್ಕೂ ನೀವೇ ಸಿಎಂ ಆಗಿರಬೇಕು ಎಂದಾಗ, ನಾನೇ ಇದ್ದೀನಿ. ಮುಂದೆಯೂ ನಾನೇ ಇರ್ತೀನಿ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ನಿಮ್ಮಪ್ಪನಾಣೆ ನೀವು ಅಧಿಕಾರಕ್ಕೆ ಬರಲ್ಲ: ಬಿಜೆಪಿ ರಾಜ್ಯದ ಜನರ ಆಶೀರ್ವಾದ ಪಡೆದು ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ನಿಮ್ಮಪ್ಪನಾಣೆ ಮತ್ತೆ ಯಾವುದೇ ಕಾರಣಕ್ಕೂ ನೀವು ಅಧಿಕಾರಕ್ಕೆ ಬರೋದಿಲ್ಲ. ಆ ಕನಸು ಕಾಣಬೇಡಿ. ೨೦೨೮ಕ್ಕೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲ ೨೦೩೩ಕ್ಕೂ ನಾವೇ ಮತ್ತೆ ಬರ್ತೇವೆ ಎಂದು ಘೋಷಿಸಿದರು.


