ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿರುವ ಗುಳಿಗೆ ಔಷದಿ ಸಂಗ್ರಹಿಸಿ ಇಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಅವಧಿ ಮೀರಿದ ಔಷದಿ ಸಂಗ್ರಹಿಸಿ ಇಟ್ಟಿದ್ದ ವೈದ್ಯನನ್ನ ಮಲ್ಲಪ್ಪ ಶಾಲದಾರ ಎಂದು ತಿಳಿದುಬಂದಿದೆ.ಇದರಿಂದ ಆಕ್ರೋಶಗೊಂಡ ಜನ ವೈದ್ಯನಿಗೆ ಧರ್ಮದೇಟು ಕೊಟ್ಟ ಘಟನೆ ನಡೆದಿದೆ.



ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಸರಿಯಾದ ಸಮಯಕ್ಕೆ ಬಾರದೇ ಇದ್ದ ಕಾರಣ ರೊಚ್ಚಿಗೆದ್ದು ಸಾರ್ವಜನಿಕರು ವೈದ್ಯನ ನಿರ್ಲಕ್ಷತನದ ಆಕ್ರೋಶ ಹೊರಹಾಕಿದ್ದಾರೆ.ಪ್ರಾಥಮಿಕ ಆರೋಗ್ಯ ಕೇಂದ್ರದ ಶುಚಿತ್ವ ಕಾಪಾಡಿಕೊಳ್ಳದೆ ಗಬ್ಬು ವಾಸನೆಯಿಂದ ಕೂಡಿದ್ದು ಬಾಣಂತಿಯರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ತಾಲೂಕಾ ವೈದ್ಯಾಧಿಕಾರಿ ಭೇಟಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.


