Friday, March 13, 2026
Flats for sale
Homeವಿದೇಶಬೆಂಗಳೂರು : ಹಲವೆಡೆ ವಿಧ್ವಂಸಕ ಕೃತ್ಯ ನಡೆಸಲು 'ಐಸಿಸ್' ಸಂಚು 13 ಶಂಕಿತ ಉಗ್ರರ ಸೆರೆ.

ಬೆಂಗಳೂರು : ಹಲವೆಡೆ ವಿಧ್ವಂಸಕ ಕೃತ್ಯ ನಡೆಸಲು ‘ಐಸಿಸ್’ ಸಂಚು 13 ಶಂಕಿತ ಉಗ್ರರ ಸೆರೆ.

ಬೆಂಗಳೂರು : ಉಗ್ರರು ಎಲ್ಲಿಯೂ ಇಲ್ಲ ನಮ್ಮ ದೇಶದಲ್ಲೇ ಅಡಗಿದ್ದಾರೆ ಎಂಬುದು ಕೆಲವರ ಮಾತು ಆದರೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯ ನಡೆಸಲು ಜಾಗತಿಕ ಭಯೋತ್ಪಾದಕ ಸಂಘಟನೆ ‘ಐಸಿಸ್’ ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಕರ್ನಾಟಕ ಹಾಗೂ ಮಹಾರಾಷ್ಟçದ 44ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಠಾತ್ ದಾಳಿ ನಡೆಸಿ13 ಮಂದಿ ಶಂಕಿತ ಉಗ್ರರನ್ನು ಬಲೆಗೆ ಕೆಡವಿದೆ.

ಎನ್‌ಐಎ ಅಧಿಕಾರಿಗಳು ಕರ್ನಾಟಕದ 1 , ಪುಣೆಯಲ್ಲಿ 2 , ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಐಸಿಸ್ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಈವರೆಗೆ 13 ಜನ ಶಂಕಿತ ಉಗ್ರರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ನಗರದಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಶಂಕಿತ ಉಗ್ರನಿಂದ 16 ಲಕ್ಷ 42 ಸಾವಿರ ನಗದು ಜಪ್ತಿ ಮಾಡಿದ್ದಾರೆ. ಶಂಕಿತ ಉಗ್ರ ಡಾಟಾ ಕನ್ಸಲ್‌ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಂಶ ದಾಳಿ ವೇಳೆ ಬೆಳಕಿಗೆ ಬಂದಿದೆ. ಪುಣೆ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ಬAಧಿಸಲಾಗಿದೆ.

ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು ಸ್ಥಳಗಳ ಪೈಕಿ ಕರ್ನಾಟಕದಲ್ಲಿ ಒಂದು ಸ್ಥಳ, ಪುಣೆಯಲ್ಲಿ2 , ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ ಒAದು ಸ್ಥಳವನ್ನು ಅಧಿಕಾರಿಗಳು ಶೋಧನ ಕರ‍್ಯ ಕೈಗೊಂಡಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್‌ಐಎ ವ್ಯಾಪಕ ತನಿಖೆ ನಡೆಸುತ್ತಿದೆ.

ಬೆಂಗಳೂರಿನಲ್ಲಿ ಶೋಧ: ನಗರದ ಫ್ರೇಜರ್ ಟೌನ್‌ನಲ್ಲಿರುವ ಅಲಿ ಅಬ್ಬಾಸ್ ಎಂಬಾತನ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮುಂಬೈ ಮೂಲದ ಅಲಿ ಅಬ್ಬಾಸ್, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. 2018 ರಲ್ಲಿ ಫ್ಲಾಟ್ ಖರೀದಿಸಿದ್ದ ಅಲಿ ಅಬ್ಬಾಸ್, ವೈದ್ಯೆಯಾಗಿರುವ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ವಾಸವಿದ್ದ. ಮಹಾರಾಷ್ಟçದಲ್ಲಿ ಬಂಧನವಾಗಿದ್ದ ಶAಕಿತನ ಜೊತೆಗೆ ಸಂಪರ್ಕದಲ್ಲಿದ್ದ ಎAದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆರೋಪಿಯ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಜಾಲಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಅಲ್-ಖೈದಾ ಮತ್ತು ಐಸಿಸ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತದ ಬೆಳವಣಿಗೆಗೆ ಪ್ರತಿಜ್ಞೆ ಮಾಡಿದ ಆರೋಪಿಗಳು ಮತ್ತು ಅವರ ಸಹಚರರು ರೂಪಿಸಿದ ಕ್ರಿಮಿನಲ್ಪಿ ತೂರಿಗೆ ಸಂಬAಧಿಸಿದ್ದಾಗಿದೆ ಮತ್ತು ಭಯೋತ್ಪಾದಕ ಗ್ಯಾಂಗ್ ಅನ್ನು ರಚಿಸಿರುವ ಮಾಹಿತಿ ಆಧರಿಸಿ ರಾಷ್ಟಿçÃಯ ತನಿಖಾ ದಳ ಈ ದಾಳಿಯನ್ನು ನಡೆಸಲಾಗಿದೆ.

ಕಳೆದ ಡಿ.೨ರಂದು ದಾಳಿ: ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟç ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ ಹಿಡಿದಿತ್ತು ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿAಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

ಎಷ್ಟು ಜನ ಬಂಧನ:
ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಲ್ಲಿ ದಾಳಿಯನ್ನು ಸಂಘಟಿಸಿತ್ತು. ನಕಲಿ ನೋಟುಗಳ ಮುದ್ರಣದ ಸ್ಪಷ್ಟ ಖಚಿತ ಸುಳಿವು ಸಿಕ್ಕ ನಂತರ ಈ ದಾಳಿ ನಡೆದಿದ್ದು ಆರೋಪಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗಡಿಯಾಚೆಯಿಂದ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತಿರುವ ಬಗ್ಗೆ ಸಂಶಯ ಮೂಡಿತ್ತು. ಈ ನಿಟ್ಟಿನಲ್ಲಿ ನವೆಂಬರ್ 24 ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ ಆಳ ತನಿಖೆಗೆ ಇಳಿದ ಸಂಸ್ಥೆಗೆ ದೇಶದೊಳಗಿನ ದುಷ್ಟ ಪ್ರಯೋಗಗಳ ಸುಳಿವುಗಳು ಸಿಕ್ಕವು. ಸಾಕಷ್ಟು ಅಧ್ಯಯನದ ಬಳಿಕ ಎನ್‌ಐಎ ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ರಾಹುಲ್ ತಾನಾಜಿ ಪಾಟೀಲ್ ಅಲಿಯಾಸ್ ಜಾವೇದ್, ಉತ್ತರ ಪ್ರದೇಶದ ಶಹಜಹಾನ್ಪು ರ ಜಿಲ್ಲೆಯ ವಿವೇಕ್ ಠಾಕೂರ್ಅ ಲಿಯಾಸ್ ಆದಿತ್ಯ ಸಿಂಗ್ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್ ಎಂಬವರ ಮೇಲೆ ಕಣ್ಣಿಟ್ಟು ಅವರನ್ನು ಬಂಧಿಸಿತು

RELATED ARTICLES

LEAVE A REPLY

Please enter your comment!
Please enter your name here

Most Popular