ಬೆಂಗಳೂರು : ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ವಿಧಾನಮಂಡಲ ಇದೀಗ ಸಂಪೂರ್ಣ ಕಾಗದರಹಿತ ವ್ಯವಸ್ಥೆಯತ್ತ ಹೆಜ್ಜೆ ಇಟ್ಟಿದೆ. ಇ-ವಿಧಾನ ಯೋಜನೆಯಡಿ ಶಾಸಕರಿಗೆ ಐಪ್ಯಾಡ್ ವಿತರಣೆ ಮಾಡುವ ಮೂಲಕ ಮುಂಗಾರು ಅಧಿವೇಶನದಿಂದ ಡಿಜಿಟಲ್ ಕಲಾಪ ವ್ಯವಸ್ಥೆ ಜಾರಿಗೆ ಬರಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮುಂದಾಳತ್ವದಲ್ಲಿ ಜಾರಿಯಾಗುತ್ತಿರುವ ಈ ಯೋಜನೆಗೆ ಸುಮಾರು ₹60 ಕೋಟಿ ವೆಚ್ಚವಾಗುತ್ತಿದೆ.ಇದರಿಂದ ಹೊಸ ವ್ಯವಸ್ಥೆಯಡಿ ವಿಧೇಯಕಗಳು,ಪ್ರಶ್ನೋತ್ತರ ಪಟ್ಟಿ,ಕಾರ್ಯಸೂಚಿ ಕಲಾಪದ ದಾಖಲೆಗಳು ಮಾಹಿತಿ ಡಿಜಿಟಲ್ ರೂಪದಲ್ಲಿ ಸಿಗಲಿದೆ. ಎಲ್ಲವೂ ಡಿಜಿಟಲ್ ರೂಪದಲ್ಲೇ ಶಾಸಕರಿಗೆ ಲಭ್ಯವಾಗಲಿವೆ. ಇದರಿಂದ ಕಾಗದ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು, ಪರಿಸರ ಸ್ನೇಹಿ ಆಡಳಿತಕ್ಕೆ ಉತ್ತೇಜನ ಸಿಗಲಿದೆ.
ಶಾಸಕರಿಗೆ ಬಯೋಮೆಟ್ರಿಕ್ ಸೌಲಭ್ಯವಿರುವ ಐಪ್ಯಾಡ್ ನೀಡಲಾಗುತ್ತದೆ. ಇದರಲ್ಲಿ ಬಯೋಮೆಟ್ರಿಕ್ ಸುರಕ್ಷತಾ ವ್ಯವಸ್ಥೆ,ಇನ್‌ಬಿಲ್ಟ್ ಇ-ವಿಧಾನ ಸಾಫ್ಟ್‌ವೇರ್,ದಾಖಲೆಗಳ ಇ-ಫಾರ್ಮ್ಯಾಟ್ ರವಾನೆ ವ್ಯವಸ್ಥೆ ಅಳವಡಿಸಲಾಗುತ್ತದೆ.
“ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್”ನಲ್ಲಿ ಎಲ್ಲ ಮಾಹಿತಿ ದೊರೆಯಲಿದೆ.ಇ-ವಿಧಾನ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶದ ಎಲ್ಲಾ ವಿಧಾನಮಂಡಲಗಳನ್ನು ಸಂಸತ್ತಿನ ಮಾದರಿಯಲ್ಲಿ ಕಾಗದರಹಿತಗೊಳಿಸುವ ಉದ್ದೇಶ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40 ಅನುದಾನ ಹಂಚಿಕೆಯಲ್ಲಿ ಜಾರಿಯಾಗುತ್ತಿದೆ“ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್” ಪರಿಕಲ್ಪನೆ ಆಧಾರಿತವಾಗಿದೆ ಶಾಸಕರಿಗೆ ತರಬೇತಿ ನೀಡಲಾಗುತ್ತದೆ.
ಯೋಜನೆ ಸುಗಮ ಜಾರಿಗೆಯಾಗಲು ಎಲ್ಲಾ ಶಾಸಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಸದನಗಳಲ್ಲಿ ಡಿಜಿಟಲ್ ಬಳಕೆ ಸುಲಭವಾಗಲು ತಾಂತ್ರಿಕ ಬದಲಾವಣೆ ಮಾಡಲಾಗುತ್ತದೆ ಜಾಮರ್ ವ್ಯವಸ್ಥೆಯಲ್ಲಿ ಅಗತ್ಯ ಪರಿಷ್ಕರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ “ಡಿಜಿಟಲ್ ಕ್ರಾಂತಿಯ ಹೊಸ ಅಧ್ಯಾಯ” ಇದಾಗಿದ್ದು “ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೆಚ್ಚ ಕಡಿತದೊಂದಿಗೆ ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲೇ ಇದು ಮಹತ್ವದ ಡಿಜಿಟಲ್ ಕ್ರಾಂತಿ. ಕಾಲಕ್ಕೆ ತಕ್ಕಂತೆ ವ್ಯವಸ್ಥೆಯೂ ಬದಲಾಗಬೇಕು,” ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.


