ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್ನಲ್ಲಿ ದೂರ ದೂರ ನಿಂತಿದ್ದರು.ಪ್ರಕರಣದ ಎ೧ ಆರೋಪಿ ಪವಿತ್ರಾಗೌಡ ಕೋರ್ಟ್ಕ ಲಾಪಕ್ಕೂ 10 ನಿಮಿಷ ಮೊದಲೇ ಕೋರ್ಟ್ನಲ್ಲಿ ಹಾಜರಾಗಿದ್ದರು. ದರ್ಶನ್ ಬರುವುದು ತಡವಾದ ಹಿನ್ನೆಲೆ 10ನಿಮಿಷ ಕಲಾಪ ಮುಂದೂಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದರು. ದರ್ಶನ್ ಬರುತ್ತಿದ್ದಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು, ಎಲ್ಲರ ಹಾಜರಾತಿಯನ್ನು ಖಾತರಿಪಡಿಸಿಕೊಂಡರು. ಬೆನ್ನು ನೋವು ಶಮನವಾಗದ ಹಿನ್ನೆಲೆ ಕುಂಟುತ್ತಲೇ ಕೋರ್ಟ್ ಹಾಲ್‌ಗೆ ದರ್ಶನ್ ಬಂದಿದ್ದಾರೆ. ಈ ವೇಳೆ ದರ್ಶನ್ ಕಡೆ ಪವಿತ್ರಾಗೌಡ ನೋಡಿದರೂ, ದರ್ಶನ್ ಅವರ ಕಡೆ ನೋಡಲೇ ಇಲ್ಲ. ಕೋರ್ಟ್ನಲ್ಲಿ ಬೇರೆ ಕಡೆ ಹೋಗಿ ಕುಳಿತುಕೊಂಡರು. ಇತರ ಆರೋಪಿಗಳ ಜೊತೆ ಮಾತನಾಡಿದ ದರ್ಶನ್, ಪವಿತ್ರಾಗೌಡಳನ್ನು ಮಾತನಾಡಿಸಲೇ ಇಲ್ಲ. ಈ ಮೂಲಕ ಅಂತರವನ್ನು ಕಾಯ್ದುಕೊಳ್ಳುವ ಯತ್ನವನ್ನು ದರ್ಶನ್ ಮಾಡಿದರು.
ಕೋರ್ಟ್ ವಿಚಾರಣೆ ಮುಗಿದ ಬಳಿಕ ಪವಿತ್ರಾ ಹೋಗುವವರೆಗೂ ದರ್ಶನ್ ಕೋರ್ಟ್ ಹಾಲ್‌ನಲ್ಲಿಯೇ ಇದ್ದು, ಬಳಿಕ ಕೋರ್ಟ್ ಹಾಲ್‌ನಿಂದ ಹೋಗಿದ್ದಾರೆ. ದರ್ಶನ್ ತನ್ನನ್ನು ಮಾತನಾಡಿಸಲಿಲ್ಲ ಎಂಬ ಕಾರಣಕ್ಕೆ ಪವಿತ್ರಾಗೌಡ ಅಳುತ್ತಾ ಕೋರ್ಟ್ನಿಂದ ಮನೆ ಕಡೆ ಹೊರಟಿದ್ದಾರೆ.