Friday, July 17, 2026
Homeರಾಜಕೀಯಬೆಂಗಳೂರು : ಪಂಚರಾಜ್ಯ ರಾಜ್ಯ ಚುನಾವಣೆ : ಪಕ್ಷ ಗೆಲ್ಲಿಸಲು ರಾಜ್ಯದಿಂದ ಸಂಸದರು, ಶಾಸಕರೂ ಸೇರಿದಂತೆ...

ಬೆಂಗಳೂರು : ಪಂಚರಾಜ್ಯ ರಾಜ್ಯ ಚುನಾವಣೆ : ಪಕ್ಷ ಗೆಲ್ಲಿಸಲು ರಾಜ್ಯದಿಂದ ಸಂಸದರು, ಶಾಸಕರೂ ಸೇರಿದಂತೆ 90 ಜನ ಬಿಜೆಪಿ ಮುಖಂಡರ ನೇಮಕ.

ಬೆಂಗಳೂರು : ಕೇರಳ, ತಮಿಳುನಾಡು, ಪಾಂಡಿಚೇರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕರ್ನಾಟಕದಿಂದ ಸಂಸದರು, ಶಾಸಕರೂ ಸೇರಿದಂತೆ 90 ಜನ ಮುಖಂಡರನ್ನು ರಾಜ್ಯ ಬಿಜೆಪಿ ನಿಯೋಜಿಸಿದ್ದು, ಮತದಾನ ಮುಗಿಯುವವರೆಗೆ ಆಯಾ ನಿಯೋಜಿತ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ನೆರೆಯ ಕೇರಳದಲ್ಲಿ ಈ ಬಾರಿ ಕನಿಷ್ಠ 20 ಕ್ಕೂ ಹೆಚ್ಚುವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿಯನ್ನು ಬಿಜೆಪಿ ಹೊಂದಿದೆ. ದಾವಣಗೆರೆ, ಬಾಗಲಕೋಟೆಗೆ ಹೊರಜಿಲೆಯಿಂದ ವಿಸ್ತಾರಕರು ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅನ್ಯ ಜಿಲ್ಲೆಗಳಿಂದ ಪೂರ್ಣಾವಧಿ ಕಾರ್ಯಕರ್ತರನ್ನು ವಿಸ್ತಾರಕರನ್ನಾಗಿ ನಿಯೋಜನೆಗೊಳಿಸಿದೆ. ಎರಡೂ ಕ್ಷೇತ್ರದಲ್ಲಿ ಸ್ಥಳೀಯವಾಗಿ ಬಣಗಳು ಸೃಷ್ಟಿಯಾಗಿರುವುದರಿಂದ ಈ ನಡೆ ಅನುಸರಿಸಲಾಗಿದೆ.

ಕೇರಳಕ್ಕೆ ಶಾಸಕರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಮಹೇಶ್ ಟೆಂಗಿನಕಾಯಿ, ಭರತ್ ಶೆಟ್ಟಿ, ಶಶಿಕಲಾ ಜೊಲ್ಲೆ, ಸಂಸದ ಬೃಜೇಶ್ ಚೌಟ ಸೇರಿದಂತೆ ಒಟ್ಟು 30 ಜನ ಮುಖಂಡರನ್ನು ನಿಯೋಜಿಸಲಾಗಿದೆ.

ತಮಿಳುನಾಡಿಗೆ ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ್ ಖಾಸಲೆ ಸೇರಿದಂತೆ ಹಲವಾರು ಮುಖಂಡರು ತಮಿಳುನಾಡಿನ ನಾನಾ ಕ್ಷೇತ್ರಗಳ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಾಂಡಿಚೇರಿಯಲ್ಲಿ ಏಪ್ರಿಲ್ 9 ರಂದೇ ಮತದಾನ ನಡೆಯಲಿದ್ದು, ಅಲ್ಲಿಗೂ ರಾಜ್ಯದ ಶಾಸಕರು, ಮಾಜಿ ಶಾಸಕರು, ಹಾಲಿ ಹಾಗೂ ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ 25 ಜನ ಮುಖಂಡರನ್ನು ನಿಯೋಜನೆ ಮಾಡಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಹಾಗೂ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಐದು ಜನರನ್ನು ಚುನಾವಣಾ ಕಾರ್ಯಕ್ಕೆ ಕಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular