Saturday, November 23, 2024
Flats for sale
Homeರಾಜಕೀಯಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಬಿಡುಗಡೆಗೆ ಮುನ್ನದೇ ಶಾಕ್,ರಾಜ್ಯದಲ್ಲಿ ಎರಡು ಸೀಟು ಗೆಲ್ಲೋದೇ ಕಷ್ಟ.

ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಬಿಡುಗಡೆಗೆ ಮುನ್ನದೇ ಶಾಕ್,ರಾಜ್ಯದಲ್ಲಿ ಎರಡು ಸೀಟು ಗೆಲ್ಲೋದೇ ಕಷ್ಟ.

ಬೆಂಗಳೂರು : ಗ್ಯಾರಂಟಿಗಳ ಮೂಲಕವೇ ಲೋಕಸಭಾ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಬಿಡುಗಡೆಗೆ ಮುನ್ನದೇ ಶಾಕ್ ತಗಲಿದೆ. ಎಐಸಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ಮೂರು ವಾರಗಳ ಹಿಂದೆ ನಡೆದ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಸಾಧನೆ ಎರಡಂಕಿ ದಾಟುವುದಿಲ್ಲ ಎನ್ನುವ ಸ್ಪಷ್ಟ ಸುಳಿವು ಸಿಕ್ಕಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಗಳಿಗೂ ಮುನ್ನ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶಸ್ವಿ ಸೂತ್ರ ಹೆಣೆದಿದ್ದ ಹಾಗೂ ಪ್ರಸ್ತುತ ಸಿಎಂ ಮುಖ್ಯ ಸಲಹೆಗಾರ ಸುನಿಲ್ ಕನಗೋಲು ಸಾರಥ್ಯದಲ್ಲಿಯೇ ಈ ಸರ್ವೆ ನಡೆಸಿದೆ. ಸರ್ವೇ ನೋಡಿ ಕಾಂಗ್ರೆಸ್ ನಾಯಕರಿಗೆ ದಿಗಿಲು ಬಡಿದಂತಾಗಿದೆ.

ಎಐಸಿಸಿ ಸೂಚನೆಯಂತೆ ನಡೆದಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ನಿರೀಕ್ಷೆಗೆ ತದ್ವಿರುದ್ಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಪ್ರಮುಖ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಜಾತಿಲೆಕ್ಕಾಚಾರದಲ್ಲಿ ಕಣಕ್ಕಿಳಿಸಿದರೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಕಾಂಗ್ರೆಸ್ ಪರವಾದ ಫಲಿತಾಂಶ ನಿರೀಕ್ಷೆ ಮಾಡಬಹುದು ಎನ್ನುವುದನ್ನು ಯಾವುದೇ ಅಭ್ಯರ್ಥಿಗಳ ಹೆಸರು ಉಲ್ಲೇಖಿಸದೆ ಸಮೀಕ್ಷೆ ಸ್ಪಷ್ಟವಾಗಿ ತಿಳಿಸಿದೆ. ಇದರ ವರದಿ ದೆಹಲಿಯಲ್ಲಿ ನಡೆದ ಚುನಾವಣೆ ಸಮಿತಿ ಸಭೆಯಲ್ಲಿ ಚರ್ಚೆಯಾದ ಬಳಿಕ, ಕೊನೆಕ್ಷಣದಲ್ಲಿ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಸ್ಥಗಿತಗೊಂಡಿತೆAದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ. ಈಗಾಗಲೇ ಸಮೀಕ್ಷೆ ಆಧರಿಸಿ ತಯಾರಾಗಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಚುನಾವಣಾ ಸಮಿತಿ ಕೇಂದ್ರಕ್ಕೆ ರವಾನಿಸಿದೆ. ಎರಡಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ವರಿಷ್ಠರಿಗೆ ಅಂತಿಮ ಆಯ್ಕೆಯ ಹೊಣೆ ನೀಡಲಾಗುತ್ತಿದೆ. ಕನಿಷ್ಟ 10ಕ್ಕೂ ಹೆಚ್ಚು ಹೊಸಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಬಿಡುಗಡೆಯಾದ 7 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಂಡ್ಯದಿAದ ಸ್ಟಾರ್‌ಚಂದ್ರು, ಹಾಸನದಿಂದ ಶ್ರೇಯಸ್ ಪಟೇಲ್, ವಿಜಯಪುರದಿಂದ ರಾಜು ಅಲಗೂರು ಹಾಗೂ ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಅವಕಾಶ ಕೊಡಲಾಗಿದೆ. ಈ ಸಂಖ್ಯೆ ಹತ್ತಕ್ಕೇರುವ ಸಾಧ್ಯತೆ ಇದು ಸೋಮವಾರ ಸಂಜೆ ಹೊತ್ತಿಗೆ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ತುಮಕೂರಿನಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ಷಡಕ್ಷರಿ, ಡಾ.ರಂಗನಾಥ್, ಮಾಜಿ ಶಾಸಕ ಗೌರಿಶಂಕರ್,ಟಿಕೆಟ್ ಆಕಾಂಕ್ಷಿ ಮುರಳೀಧರ್ ಹಾಲಪ್ಪ ಮತ್ತಿತರರು, ಮುದ್ದಹನುಮೇಗೌಡರಿಗೆ ಅವಕಾಶ ಮಾಡಿಕೊಡದಂತೆ ಆಗ್ರಹಿಸಿದ್ದರು. ಇದನ್ನು ಲೆಕ್ಕಿಸದೆ ಸಚಿವರಾದ ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್ಶಿ ಫಾರಸಿನಂತೆ ಹೈಕಮಾಂಡ್ ನಡೆದುಕೊಂಡಿದೆ ಎಂದು ಅತೃಪ್ತಿ ಹೊರಹಾಕಿದ್ದಾರೆ. ಹಾಗಾಗಿ ತುಮಕೂರು ಕಾಂಗ್ರೆಸ್ ಬೂದಿ ಮುಚ್ಚಿದ ಕೆಂಡದಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular