ಬಳ್ಳಾರಿ : ನಮ್ಮ ಸರ್ಕಾರ ಬಡವರ, ಹಿಂದುಳಿದವರ ಮತ್ತು ಮಹಿಳೆಯರ ಪರವಾಗಿರುವ ಸರ್ಕಾರ. ಯಾವುದೇ ಕಾರಣಕ್ಕೂ ನಮ್ಮ ಭರವಸೆಯ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಕೊಟ್ಟ ಮಾತಿನಂತೆ ನಾವು
ನಡೆದುಕೊಂಡಿದ್ದೇವೆ. ನಮ್ಮದು ನುಡಿದಂತೆ ನಡೆದುಕೊಂಡ ಸರಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿಯಲ್ಲಿ ಮೃತಪಟ್ಟಿರುವ ಬಾಣಂತಿಯರು ತುಂಬಾ ಬಡವರಿದ್ದಾರೆ. ಅವರ ಕುಟುಂಬಕ್ಕೆ ನೆರವಾಗುವುದು ಸರ್ಕಾರದ ಜವಾಬ್ದಾರಿ. ಅವರ ಒಳಿತಿಗಾಗಿ ಹೆಚ್ಚಿನ ನೆರವು ಅಂದರೆ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿದ್ದೇವೆ ಎಂದು ಮುಖ್ಯಮAತ್ರಿ ಹೇಳಿದರು.
ಪ್ರಧಾನಿ ಸುಳ್ಳುಗಾರ : ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ಗಳ ವರೆಗೂ ಎಲ್ಲರೂ ಸರಣಿ ಸುಳ್ಳು, ಅಪಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟç ಚುನಾವಣೆಯಲ್ಲಿ ನನ್ನ ಮೇಲೆ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದೆ ಆದರೆ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಮ್ಮದು ನುಡಿದಂತೆ ನಡೆದುಕೊಂಡ ಸರಕಾರ ಎಂದರು.
ಕಾಂಗ್ರೆಸ್ನ 138, ಹರಪನಹಳ್ಳಿ, ಪಾಂಡವಪುರದ ಇಬ್ಬರು ಶಾಸಕರು ಸೇರಿ ಒಟ್ಟು 140 ಸ್ಥಾನಗಳು ಇವೆ. ಬಿಜೆಪಿಯ ಕೆಲ ಶಾಸಕರ ಬೆಂಬಲವೂ ಇದೆ. ಇಷ್ಟು ಶಕ್ತಿ ಇರುವ ನಮ್ಮ ಸರಕಾರವನ್ನು ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಸಂಡೂರಿನಲ್ಲಿ ಮತದಾರರಿಗೆ ಅಭಿನಂದನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿಯವರು, ಜೆಡಿಎಸ್ನ ದೇವೇಗೌಡ, ಎಚ್ಡಿ ಕುಮಾರಸ್ವಾಮಿ ನಮ್ಮ ಸರಕಾರವನ್ನು ಕಿತ್ತು ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಇಷ್ಟೊಂದು ಬಲಶಾಲಿಯಾಗಿರುವ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವೇ?.
ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ, ಕೊನೆಗೆ ಮತದಾರರೇ ಈಶ್ವರ ಅಂತಾ ನಿಮಗೆ ಕೈ ಮುಗಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಗಾಂಧೀಜಿ ಅವರು ಸಂಡೂರನ್ನು ಕರ್ನಾಟಕದ ಕಾಶ್ಮೀರ ಅಂತಾ ಕರೆದಿದ್ದರು. ಬಳ್ಳಾರಿ ವಿಜಯನಗರ ಜಿಲ್ಲೆಗಳು ಕಾಂಗ್ರೆಸ್ ಭದ್ರಕೋಟೆ. ಈ ಹಿಂದೆ ಸೋನಿಯಾಗಾಂಧಿ ಅವರನ್ನು ಈ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸಿದ ಇತಿಹಾಸವಿದೆ.
ಸತತವಾಗಿ ೧೩ ಬಾರಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಾಗಿದೆ. ಸಂಡೂರಷ್ಟೇ ಅಲ್ಲ; ಬೊಮ್ಮಾಯಿ, ಕುಮಾರಸ್ವಾಮಿ ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ದೇವೇಗೌಡರು ಅಲ್ಲಿಯೇ ಕುಳುತುಕೊಂಡ್ರು ಆದರೂ ನಾವು ಗೆದ್ದು ಬಂದಿದ್ದೇವೆ. ಜನರು ಗ್ಯಾರಂಟಿ ಯೋಜನೆಗಳು ಮೂಲಕ ಆಶೀರ್ವಾದ ಮಾಡಿದರು. ಅವರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಸಂಡೂರಿನ ಯಾವುದೇ ಕೆಲಸಲ್ಲೂ ಸರಕಾರ ಬೆಂಬಲ ನೀಡುತ್ತದೆ ಎಂದು ಹೇಳಿದರು.


