Sunday, July 26, 2026
Homeಕ್ರೈಂಬಂಟ್ವಾಳ : ತಾಯಿ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕಿಯರು ನಿಗೂಢವಾಗಿ ನಾಪತ್ತೆ'

ಬಂಟ್ವಾಳ : ತಾಯಿ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕಿಯರು ನಿಗೂಢವಾಗಿ ನಾಪತ್ತೆ’

ಬಂಟ್ವಾಳ : ತಂದೆ ಮನೆಯಿಂದ ತಾಯಿ ಮನೆಗೆ ತೆರಳುತ್ತಿದ್ದ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕಳದಲ್ಲಿ ನಡೆದಿದೆ.

ನಾಪತ್ತೆಯಾದ ಬಾಲಕಿಯರನ್ನು ಶ್ರೇಯಾ ಮತ್ತು ಆಕೆಯ ತಂಗಿ ಎಂದು ಗುರುತಿಸಲಾಗಿದ್ದು, ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಬೆರ್ಕಳ ನಿವಾಸಿ ಲವೀನಾ ಎಂಬುವರ ಪುತ್ರಿಯರು.

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿರುವ ಲವೀನಾ, ಜೂ.7ರಂದು ತನ್ನ ಇಬ್ಬರು ಪುತ್ರಿಯರು ತಂದೆಯ ಮನೆಗೆ ಬಂದಿದ್ದರು.ಆದರೆ ಜು.13ರಂದು ಲವೀನಾ ನಿವಾಸಕ್ಕೆ ತೆರಳಲು ಹೊರಟಾಗ ಇಬ್ಬರೂ ತೆರಳಿದ್ದರು. 

ಇಬ್ಬರು ಬಾಲಕಿಯರು ನಿಗೂಢವಾಗಿ ನಾಪತ್ತೆಯಾಗಿರುವುದು ಆತಂಕ ಹಾಗೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಾಪತ್ತೆಯಾಗಿರುವ ಬಾಲಕಿಯರ ತಾಯಿ ಲವೀನಾ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಇಬ್ಬರು ಮಕ್ಕಳ ಪತ್ತೆಗೆ ಸಹಕರಿಸುವಂತೆ ಕೋರಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular