ಬಂಟ್ವಾಳ ; 60 ಕಿ.ಲೋ ಮೀಟರ್ ಗೆ ಸೀಮಿತ ವಾಗಿರುವ ಟೋಲ್ ನ್ನು ಎನ್.ಎಚ್.75ರ ಬಿ.ಸಿ.ರೋಡ್ ಬಳಿಯ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಮೂರನೇ ಟೋಲ್ ಬೂತ್ ಕಾರ್ಯಾರಂಭ ಮಾಡಿದ್ದು, ತಿಂಗಳ ಹಿಂದೆಯೇ ಬೂತ್ ನಿರ್ಮಾಣಗೊಂಡಿದ್ದರೂ ತೆರೆಯಲಾಗಿಲ್ಲ.
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಹಲವು ವರ್ಷಗಳ ಹಿಂದೆ ಕಾರ್ಯನಿರ್ವಹಿಸಲು ಆರಂಭಿಸಿದಾಗಿನಿಂದ ಕೇವಲ ಎರಡು ಟೋಲ್ ಬೂತ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಟೋಲ್ ಗೇಟ್ ದಾಟಲು ವಾಹನಗಳು ಸರದಿ ಸಾಲಿನಲ್ಲಿ ಬಹಳ ಹೊತ್ತು ನಿಲ್ಲಬೇಕಾಯಿತು. ನಾಲ್ಕು ವರ್ಷಗಳ ಹಿಂದೆ ಎನ್‌ಎಚ್‌ಎಐ ಮೂರನೇ ಟೋಲ್‌ವೇ ಕಾಮಗಾರಿ ಆರಂಭಿಸಿ ಮೆಸ್ಕಾಂನಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದ ಕಾರಣ ಅದನ್ನು ನಿಲ್ಲಿಸಿತ್ತು. ನಂತರ ಕಂಬಗಳು ಸ್ಥಳಾಂತರಗೊಂಡರೂ, ಎನ್‌ಎಚ್ ಅಗಲೀಕರಣದಿಂದಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಯಿತು.
ಕಾನೂನಿನ ಚೌಕಟ್ಟಿನ ಪ್ರಕಾರ ಈ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ಅನಧಿಕೃತವಾದರು ಇದರಲ್ಲಿ ಕಮಿಷನ್ ದಂಧೆ ಇರುವುದರಿಂದ 60 ಕಿ.ಮೀ ಗೆ ಇರುವ ಟೋಲ್ ಈಗ 30 ಕೀ.ಮೀ ತಲುಪಿದೆ, ಸಂಸದ ಹಾಗೂ ಶಾಸಕರ ಲಾಬಿ ನಡೆಯುತ್ತದೆ.