Friday, March 13, 2026
Flats for sale
Homeಜಿಲ್ಲೆಪುತ್ತೂರು : ಯುವತಿಯ ಕತ್ತು ಸೀಳಿ ಪರಾರಿಯಾದ ಪ್ರಿಯಕರ,ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಯುವತಿ ಸಾವು .

ಪುತ್ತೂರು : ಯುವತಿಯ ಕತ್ತು ಸೀಳಿ ಪರಾರಿಯಾದ ಪ್ರಿಯಕರ,ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಯುವತಿ ಸಾವು .

ಪುತ್ತೂರು : ಬೈಕ್ ನಲ್ಲಿ ಬಂದ ಪ್ರಿಯಕರ ಯುವತಿಯ ಕತ್ತು ಸೀಳಿ ಪರಾರಿಯಾದ ಘಟನೆ ದ.ಕ‌. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಯುವತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲದ ಗೌರಿ ಎಂದು ತಿಳಿದುಬಂದಿದೆ,ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ಘಟನೆ ನಡೆದಿದ್ದು ಪುತ್ತೂರಿನ ಬರೆಪ್ಪಾಡಿಯ ಯುವಕ ಎಂದು ಶಂಕೆ ವ್ಯಕ್ತವಾಗಿತ್ತು. ವ್ಯಕ್ತಿ ಮೂರರಿಂದ ನಾಲ್ಕು ಭಾರೀ ಯುವತಿಯ ಕತ್ತುಗೆ ಸೀಳಿದ್ದು ಯುವತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದ ಯುವಕನಿಂದ ಈ ಕೃತ್ಯ ನಡೆಸಿದ್ದು.ಪುತ್ತೂರಿನ ಬಸ್ ನಿಲ್ದಾಣದ ಬಳಿ ಯುವತಿ ಗೌರಿ ಹಾಗೂ ಯುವಕನ ನಡುವೆ ಗಲಾಟೆ ನಡೆದಿದೆ ಬಳಿಕ ಪುತ್ತೂರು ಮಹಿಳ ಠಾಣೆಯ ಬಳಿ ರಂಪಾಟ ನಡೆದಿದೆ , ಈ ವೇಳೆ ಯುವತಿ ಗೌರಿ ಪೊಲೀಸ್ ಠಾಣೆಗೆ ದೂರು ನೀಡಿದುವುದಾಗಿ ತಿಳಿಸಿದ ಸಂದರ್ಭದಲ್ಲಿ ಯುವಕ ಕತ್ತು ಸೀಳಿ ಪರಾರಿಯಾಗಿದ್ದಾನೆ.

ಪರಸ್ಪರ ಪ್ರೀತಿಸುತ್ತಿದ್ದ ಗೌರಿ ಮತ್ತು ಪದ್ಮರಾಜ್ ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿಕೆಲಸ ಮಾಡುತಿದ್ದರು.ಪದ್ಮರಾಜ್ ಮತ್ತು ಗೌರಿ ಇಬ್ಬರೂ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದು ,ಈ ಸಂಬಂಧ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕತ್ತು ಸೀಳಿ ಯುವತಿಯ ಕೊಲೆಗೆ ಯತ್ನ ಪ್ರಕರಣದಲ್ಲಿ ಗಂಭೀರ ಗಾಯಗೊಂಡ ಯುವತಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಯುವತಿ ಗೌರಿಯನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ದಾರಿ ಮದ್ಯೆ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಇದೆ. ಯುವಕನ ಬೈಕ್ ನಂಬರ್ ಅಧಾರದಲ್ಲಿ ಪದ್ಮರಾಜ್ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಚೂರಿ ಇರಿದ ಪದ್ಮರಾಜ್ ಎಂಬಾತನ ವಶಕ್ಕೆ ಪಡೆದಿದ್ದಾರೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular