ಪುತ್ತೂರು; ಗಾಂಧೀಜಿ ನಿಂತ ಪುತ್ತೂರಿನ ಪುಣ್ಯದ ಮಣ್ಣಿನಲ್ಲಿ ಅವರ ಜನ್ಮಜಯಂತಿ ಆಚರಣೆ ನಡೆಸುತ್ತರಿವುದು ಪುಣ್ಯದಾಯಕ ಕೆಲಸವಾಗಿದೆ. ಗಾಂಧೀಜಿ ಸಾರಿದ ಸ್ವಚ್ಛತೆ ಮನಸ್ಸಿನಲ್ಲಿ ಬರಬೇಕು ಹೊರತು ಕಸ ಗುಡಿಸುವ ಫೋಸ್ ಕೊಡುವುದರಲ್ಲಿ ಅಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿ ಕಟ್ಟೆ ಸಮಿತಿ ಹಾಗೂ ವಿವಿಧ ಸಂಘಸAಸ್ಥೆಗಳ ಆಶ್ರಯದಲ್ಲಿ ನಗರದ ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ನಡೆದ ರಾಷ್ಟçಪಿತ ಮಹತ್ಮಾ ಗಾಂಧೀಜಿ ಜಯಂತಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಚ್ಛತೆ ಎಂಬುವುದು ಜಾಗೃತಿಯಾಗಿದೆ. ಪೊರಕೆ ಹಿಡಿದು ಫೋಟೊ ಹೊಡೆದ ಮಾತ್ರಕ್ಕೆ ದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಎಲ್ಲಾ ಜಾತಿ ಧರ್ಮದವರು ಒಟ್ಟು ಸೇರುವಿಕೆಯಲ್ಲಿ ದೇಶದ ಉದ್ಧಾರವೇ ಹೊರತು ಅದಾಗದಿದ್ದರೆ ದೇಶ ವಿಶ್ವಗುರು ಆಗುವುದು ಅಸಾಧ್ಯ ಎಂದರು.
ಗಾoಧಿಕಟ್ಟೆ ಮುಂಭಾಗ ದೀಪಪ್ರಜ್ವಲನೆ ಮಾಡಿದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ರಾಷ್ಟçಪಿತ ಮಹತ್ಮಾ ಗಾಂಧೀಜಿ ಅವರ ತ್ಯಾಗ ಮತ್ತು ಬಲಿದಾನ ಇಂದಿಗೂ ಸ್ಮರಣೀಯವಾಗಿದೆ. ಯುದ್ಧ ಕಾಲಯುಗದಲ್ಲಿ ಅಹಿಂಸೆಯ ಮೂಲಕ ಶಾಂತಿಯನ್ನು ಪ್ರತಿಪಾಧಿಸಿದ ಗಾಂಧಿ ಅವರು ವಿಶ್ವಕ್ಕೆ ಪ್ರೇರಣೆಯಾಗಿದ್ದಾರೆ. ಅದೇ ರೀತಿ ಇಂದು ಜನ್ಮ ಜಯಂತಿ ಆಚರಿಸುತ್ತಿರುವ ಲಾಲ್ ಬಹದ್ದೂರು ಶಾಸ್ತಿç ಅವರು ಜೈವಾನ್ ಜೈ ಕಿಸಾನ್ ಘೋಷಣೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ನಗರಸಬೆಯಲ್ಲಿ ಕಳೆದ ೨೦ ವರ್ಷಗಳಿಂದ ಪೌರಕಾರ್ಮಿಕರಾಗಿರುವ ಸೀತಾ, ದಯಾನಂದ ಮತ್ತು ಗುಲಾಬಿ ಅವರನ್ನು ಸನ್ಮಾನಿಸಲಾಯಿತು. ಗಾಂಧೀ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಲಾದ ಗಾಂಧೀ ಭಾವಚಿತ್ರ ರಚನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ರಾಮಕೃಷ್ಣ ಪ್ರೌಢಶಾಲಾ ಸ್ಕೌಟ್ಸ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಶಂಕರ್,ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ,ಸಯ್ಯದ್ ಕಲೀಮ್,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ, ಉಪಾಧ್ಯಕ್ಷ ನಿವೃತ್ತ ಯೋಧ ರಮೇಶ್ ಬಾಬು,ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ಸಂಘಸAಸ್ಥೆಗಳ ಪ್ರಮುಖರಾದ ಜಯರಾಜ್ ಭಂಡಾರಿ, ಪಶುಪತಿ ಶರ್ಮ, ಸುಂದರ್ ರೈ, ಸುಹಾಸ್ ಮರಿಕೆ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.


