Saturday, October 10, 2026
Homeಜಿಲ್ಲೆಪುತ್ತೂರು : ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ!

ಪುತ್ತೂರು : ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ!

ಪುತ್ತೂರು : ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಶಿವಪ್ರಸಾದ್ ಅವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

2026ರ ಅಕ್ಟೋಬರ್ 5ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಗೋಸಾಗಾಟ ಘಟನೆಗೆ ಸಂಬಂಧಿಸಿದಂತೆ ಅ.ಕ್ರ. 125/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತ ಶಿವಪ್ರಸಾದ್ ಅವರು ತಮ್ಮ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೆ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 8ರಂದು ಆರೋಪಿತನ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಗಳು ನಿಯಮಾನುಸಾರ ನಡೆಯಲಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular