Saturday, August 29, 2026
Homeದೇಶನವದೆಹಲಿ : ರೈಲಿನಲ್ಲಿ ಕಸ ಹಾಕಿದರೆ ಇನ್ಮುಂದೆ ₹1,000 ದಂಡ,ರೈಲ್ವೇಯಲ್ಲಿ ಸ್ವಚ್ಛತೆಗೆ ಕಠಿಣ ನಿಯಮ.

ನವದೆಹಲಿ : ರೈಲಿನಲ್ಲಿ ಕಸ ಹಾಕಿದರೆ ಇನ್ಮುಂದೆ ₹1,000 ದಂಡ,ರೈಲ್ವೇಯಲ್ಲಿ ಸ್ವಚ್ಛತೆಗೆ ಕಠಿಣ ನಿಯಮ.

ಹೊಸದಿಲ್ಲಿ : ರೈಲು ನಿಲ್ದಾಣಗಳಲ್ಲಿ ಹಾಗೂ ರೈಲಿನೊಳಗೆ ಕಸ ಹಾಕುವ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ದಂಡದ ಮೊತ್ತವನ್ನು ಹೆಚ್ಚಿಸಿದೆ.

ಆಗಸ್ಟ್ 24ರಂದು ರೈಲ್ವೇ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಂತೆ, ರೈಲು ನಿಲ್ದಾಣ ಹಾಗೂ ಬೋಗಿಗಳಲ್ಲಿ ಕಸ ಹಾಕಿದರೆ ವಿಧಿಸಲಾಗುತ್ತಿದ್ದ ₹500 ದಂಡವನ್ನು ₹1,000ಕ್ಕೆ ಏರಿಕೆ ಮಾಡಲಾಗಿದೆ.

ಭಾರತೀಯ ರೈಲ್ವೇ (ರೈಲ್ವೇ ಆವರಣದಲ್ಲಿ ಸ್ವಚ್ಛತೆ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳಿಗೆ ದಂಡ) ನಿಯಮಗಳು, 2012ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಅದರಂತೆ ಈ ಹೊಸ ದಂಡ ಜಾರಿಗೆ ಬರಲಿದೆ.

ದಂಡ ಪಾವತಿಸಲು ವಿಫಲರಾದವರ ವಿರುದ್ಧ ಪ್ರಕರಣ ದಾಖಲಿಸಬಹುದು. ಬಳಿಕ ಅಂತಹವರಿಗೆ ₹2,000ವರೆಗೆ ದಂಡ ವಿಧಿಸುವ ಅವಕಾಶವೂ ಇದೆ. ರೈಲು ಮತ್ತು ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ರೈಲ್ವೇ ಇಲಾಖೆ ಈ ಕ್ರಮ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular