Tuesday, May 19, 2026
Flats for sale
Homeದೇಶನವದೆಹಲಿ : ಮತ್ತೆ ಇಂಧನ ದರ ಏರಿಕೆ ಶಾಕ್: ವಾರದಲ್ಲೇ 2ನೇ ಬಾರಿ ಪೆಟ್ರೋಲ್, ಡೀಸೆಲ್...

ನವದೆಹಲಿ : ಮತ್ತೆ ಇಂಧನ ದರ ಏರಿಕೆ ಶಾಕ್: ವಾರದಲ್ಲೇ 2ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ.

ನವದೆಹಲಿ : ದೇಶದ ಜನತೆಗೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಶಾಕ್ ಎದುರಾಗಿದೆ. ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳ ಮಾಡಲಾಗಿದೆ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಇಂಧನ ದರ ಏರಿಕೆಯಾಗಿದೆ.

ರಾಜಧಾನಿ ನವದೆಹಲಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹97.77ರಿಂದ ₹98.64ಕ್ಕೆ ಏರಿಕೆಯಾಗಿದೆ. ಡೀಸೆಲ್ ದರವೂ ₹90.67ರಿಂದ ₹91.58ಕ್ಕೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಕಳೆದ ಶುಕ್ರವಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಲೀಟರ್‌ಗೆ ₹3ರಷ್ಟು ಹೆಚ್ಚಿಸಲಾಗಿತ್ತು. ಹೀಗಾಗಿ ವಾರದೊಳಗೆ ಎರಡನೇ ಬಾರಿ ದರ ಏರಿಕೆ ಸಂಭವಿಸಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ₹107.59 ಹಾಗೂ ಡೀಸೆಲ್ ₹94.08ಕ್ಕೆ ತಲುಪಿದೆ. ಕೋಲ್ಕತ್ತಾನಲ್ಲಿ ಪೆಟ್ರೋಲ್ ₹109.70 ಮತ್ತು ಡೀಸೆಲ್ ₹96.07ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹104.49 ಹಾಗೂ ಡೀಸೆಲ್ ₹96.11ಕ್ಕೆ ತಲುಪಿದೆ.

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಹಾರ್ಮುಜ್ ಜಲಸಂಧಿಯ ವ್ಯಾಪಾರ ಅಡಚಣೆ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಇಂಧನ ದರಗಳು ಹೆಚ್ಚಳವಾಗಿವೆ ಎನ್ನಲಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ ಮೀರಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular