Thursday, July 23, 2026
Homeವಿದೇಶನವದೆಹಲಿ : ಆದಿತ್ಯ-ಎಲ್1 ಉಡಾವಣೆಯಾದ ದಿನವೇ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು ; ಇಸ್ರೋ ಮುಖ್ಯಸ್ಥ ಸೋಮನಾಥ್.

ನವದೆಹಲಿ : ಆದಿತ್ಯ-ಎಲ್1 ಉಡಾವಣೆಯಾದ ದಿನವೇ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು ; ಇಸ್ರೋ ಮುಖ್ಯಸ್ಥ ಸೋಮನಾಥ್.

ನವದೆಹಲಿ : ಭಾರತದ ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್ ಹೇಳಿದ್ದಾರೆ.

“ಚಂದ್ರಯಾನ-3 ಮಿಷನ್ ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಆದರೆ, ಆ ಸಮಯದಲ್ಲಿ ನನಗೆ ಸ್ಪಷ್ಟವಾಗಿಲ್ಲ, ಆದಿತ್ಯ ಮಿಷನ್ ದಿನದಂದು ಕಾಯಿಲೆ ಇರುವುದು ಸ್ಪಷ್ಟವಾಯಿತು . ಇದರಿಂದ ಅವರು ಮತ್ತವರ ಕುಟುಂಬದವರು ತುಂಬಾ ಬೇಸರಗೊಂಡಿದ್ದರು ಎಂದು ಹೇಳಿದ್ದಾರೆ.

ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆಸ್ಪತ್ರೆಗೆ ಭೇಟಿನೀಡಿದ ಸಂದರ್ಭದಲ್ಲಿ ಮನವರಿಕೆಯಾಗಿದೆ . ಈ ಸುದ್ದಿ ಕೇಳಿ ಎಲ್ಲಾ ವಿಜ್ಞಾನಿಗಳು ಕೂಡ ಬೇಸರಗೊಂಡಿದ್ದಾರೆ, ಉಡಾವಣೆ ಬಳಿಕ ಹೊಟ್ಟೆಯ ಸ್ಕ್ಯಾನ್ ಮಾಡಲಾಯಿತು. ಆಗ ರೋಗ ಬಹಿರಂಗವಾಯಿತು. ಹೆಚ್ಚಿನ ತನಿಖೆ ಹಾಗೂ ಚಿಕಿತ್ಸೆಗಾಗಿ ಚೆನ್ನೈಗೆ ಹೋಗಿದ್ದೆ ಅನುವಂಶಿಕವಾಗಿ ಕ್ಯಾನ್ಸರ್ ಹಾಗೂ ಉದರದ ಕ್ಯಾನ್ಸರ್​ ಇತ್ತು, ತಕ್ಷಣವೇ ಕಿಮೋ ಥೆರಪಿ ನಡೆಸಿದ್ದೆನೆ ಎಂದು ತಿಳಿಸಿದ್ದಾರೆ

ವರದಿಯ ಪ್ರಕಾರ, ಸೋಮನಾಥ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ನಂತರ ಕೀಮೋಥೆರಪಿಯನ್ನು ಪ್ರಾರಂಭಿಸಿದರು. “ಇದು ಕುಟುಂಬಕ್ಕೆ ಆಘಾತವಾಗಿದೆ. ಆದರೆ ಈಗ, ನಾನು ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯನ್ನು ಪರಿಹಾರವೆಂದು ಗ್ರಹಿಸುತ್ತೇನೆ, ”ಎಂದು ಸೋಮನಾಥ್ ಆಶಾವಾದಿಯಾಗಿ ಹೇಳಿದ್ದಾರೆ.

“ಆ ಸಮಯದಲ್ಲಿ ಸಂಪೂರ್ಣ ಗುಣಪಡಿಸುವ ಬಗ್ಗೆ ನನಗೆ ಅನಿಶ್ಚಿತವಾಗಿತ್ತು, ಇದು ಸುದೀರ್ಘ ಪ್ರಕ್ರಿಯೆ, ನಾನು ಈ ಯುದ್ಧದಲ್ಲಿ ಹೋರಾಡುತ್ತೇನೆ, ನಾಲ್ಕು ದಿನ ಮಾತ್ರ ಆಸ್ಪತ್ರೆಯಲ್ಲಿದ್ದೆ, ಯಾವುದೇ ನೋವಿಲ್ಲದೆ ಇಸ್ರೋದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular