ನವದೆಹಲಿ : ದುಬಾರಿ ತೆರಿಗೆ ಸಮರ ಹಾಗೂ ವ್ಯಾಪಾರ ಒಪ್ಪಂದ ಯುದ್ಧದ ಬಳಿಕ ಭಾರತಕ್ಕೆ ಬೆಣ್ಣೆ ಸವರಲು ಅಮೆರಿಕ ಮುಂದಾಗಿದೆ. ಈ ನಿಟ್ಟಿನಲ್ಲಿ ಟ್ರಂಪ್ ಆಪ್ತ, ಅಮೆರಿಕದ ಭಾರತ ರಾಯಭಾರಿ ಸೆರ್ಗಿಯೋ ಗೋರ್ ಸೋಮವಾರ ಭಾರತ ಸರ್ಕಾರಕ್ಕೆ ಮಸ್ಕಾ ಹೊಡೆಯುವ ಕೆಲಸ ಮಾಡಿದ್ದಾರೆ.
ಭಾರತ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮೆರಿಕಕ್ಕೆ ಭಾರತದಷ್ಟು ಪ್ರಮುಖ ಪಾಲುದಾರ ದೇಶ ಬೇರೊಂದಿಲ್ಲ. ಹೀಗಾಗಿ ಉಭಯ ದೇಶಗಳ ನಡುವೆ ಮತ್ತೆ ವ್ಯಾಪಾರ ಒಪ್ಪಂದ ಮಾತುಕತೆ ಪುನರಾರಂಭವಾಗಲಿದೆ ಎಂದು ಗೋರ್ ಹೇಳಿದ್ದಾರೆ.
ಭಾರತ ಜಗತ್ತಿನ ಅತಿದೊಡ್ಡ ರಾಷ್ಟ್ರ ಹೀಗಾಗಿ ಯಾವುದೇ ಕೆಲಸವನ್ನು ಸುಲಭವಾಗಿ ಅಂತಿಮಗೊಳಿಸಲು ಸಾಧ್ಯವಿಲ್ಲ. ಆದರೆ ವ್ಯಾಪಾರ ಒಪ್ಪಂದ ಉಭಯ ದೇಶಗಳ ಸಂಬAಧಕ್ಕೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಭದ್ರತೆ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಸೇರಿ ಭಯೋತ್ಪಾದನೆಯ ವಿರುದ್ಧ ಕೆಲಸ ಮುಂದು ವರೆಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತಕ್ಕಿಂತ ಬೇರೆ ಯಾವ ಪಾಲುದಾರ ರಾಷ್ಟçವೂ ಮುಖ್ಯವಲ್ಲ. ಮುಂಬರುವ ವರ್ಷಗಳಲ್ಲಿ ಮಹತ್ವದ ಕಾರ್ಯಸೂಚಿಯನ್ನು ಅನುಸರಿಸುವುದು ರಾಯಭಾರಿ ಆಗಿ ನನ್ನ ಜವಾಬ್ದಾರಿಯಾಗಿದೆ ಎಂದರು .
ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಅಧ್ಯಕ್ಷ ಟ್ರಂಪ್ ಶೇ.25 ರಷ್ಟು ಸುಂಕ ವಿಧಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವಕ್ಕೆ ಹೆಚ್ಚು ಶೇ.25 ಸೇರಿ ಒಟ್ಟು ಶೇ.50ರಷ್ಟು ಸುಂಕ ವಿಧಿಸಿದ್ದಾರೆ. ಅಲ್ಲದೇ ಶೇ.500 ರಷ್ಟು ಸುಂಕ ವಿಧಿಸುವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸವಾಲಿನ ಕೆಲಸವಾಗಿದೆ. ಎರಡು ಕಡೆಯವರೂ ಮಾತುಕತೆಯಲ್ಲಿ ತೊಡಗಿದ್ದಾರೆ. ಉಭಯ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಆಗುವುದಂತೂ ನಿಶ್ಚಿತ. ಭಾರತ ಮತ್ತು ಅಮೆರಿಕ ನಡುವಿನನ ಸಂಬAಧವನ್ನು ಮುಂದಿನ ಹಂತಕ್ಕೆ ಕೊAಡೊಯ್ಯುವ ಗುರಿ ಹೊಂದಿದ್ದೇನೆ ಎAದು ಹೇಳಿದ್ದಾರೆ.
ಭಾರತಕ್ಕೆ ಭೇಟಿ ಸಾಧ್ಯತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಭಾನುವಾರ ಫೋನಲ್ಲಿ ಮಾತಾಡಿದ್ದೇನೆ. ಈ ವೇಳೆ ಭಾರತದ ಜನತೆಗೆ ಹಾಗೂ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿ ಅವರಿಗೆ ಶುಭಾಶಯ ತಿಳಿಸಲು ಹೇಳಿದ್ದಾರೆ. ಇನ್ನು ೨೦೨೭ರಲ್ಲಿ ಅಧ್ಯಕ್ಷ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಯಭಾರಿ ಗೋರ್ ತಿಳಿಸಿದ್ದಾರೆ.
ಭಾರತದ ಮೇಲೆ ೫೦೦%ನಷ್ಟು ಟ್ಯಾಕ್ಸ್ ಹಾಕುವುದು ಸವಾಲಿನ ಕೆಲಸ. ಹೇಳಿದಷ್ಟು ಅದು ಸುಲಭ ಅಲ್ಲ,ವ್ಯಾಪಾರ ಒಪ್ಪಂದದ ವಿಷಯದಲ್ಲಿ ಎರಡೂ ಕಡೆ ಅವರು ಈಗಾಗಲೇ ಮಾತುಕತೆಯನ್ನು ಮಾಡ್ತಿದ್ದಾರೆ,ಭಾರತ-ಅಮೆರಿಕದ ಮಧ್ಯೆ ವ್ಯಾಪಾರ ಒಪ್ಪಂದ ಆಗುವುದು ಗ್ಯಾರಂಟಿ, ಇದರಲ್ಲಿ ಸಂಶಯ ಬೇಡ,ಭಾರತ-ಅಮೆರಿಕ ಸಂಬಂಧ ಮುಂದಿನ ಹಂತಕ್ಕೆ ಕೊಂಡೊಯುತ್ತೇನೆ : ನೂತನ ರಾಯಭಾರಿ ಗೋರ್ ಹೇಳಿದ್ದಾರೆ.


