ದುಬೈ : ಭಾನುವಾರ ಇಲ್ಲಿ ನಡೆದ ಚಾಂಪಿಯನ್ಸ್ಟ್ರೋ ಫಿ ಕ್ರಿಕೆಟ್ ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ 44 ರನ್ ಜಯ ಸಾಧಿಸಿದ ಭಾರತ, `ಎ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೆ ಏರಿತು.
ಆ ಮೂಲಕ ಮಾ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ `ಬಿ’ ಗುಂಪಿನಲ್ಲಿಎರಡನೇ ಸ್ಥಾನ ಪಡೆದ ಆಸ್ಟೆçÃಲಿಯಾ ವಿರುದ್ಧ ಸೆಣಸಾಟ ನಡೆಸಲು ಸಜ್ಜಾಗಿದೆ. ಜಯ ಗಳಿಸಲು ನಿಗದಿತ 50 ಓವರ್‌ಗಳಲ್ಲಿ 250 ರನ್ ಸೇರಿಸುವ ಗುರಿ ಪಡೆದ ನ್ಯೂಜಿಲೆಂಡ್,ವರುಣ್ ಚಕ್ರವರ್ತಿ ಅವರ ಮಾರಕ ದಾಳಿಗೆ ತತ್ತರಿಸಿ 45.3 ಓವರ್‌ಗಳಲ್ಲಿ 205 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸ್ನ್ 81 (120 ಎಸೆತ, 7 ಬೌಂಡರಿ), ನಾಯಕ ಮಿಚೆಲ್ ಸ್ಯಾಂಟ್ನರ್28 (31 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ವಿಲ್ ಯಂಗ್ 22 (25 ಎಸೆತ, 3 ಬೌಂಡರಿ) ರನ್ ಮಾಡಿದರೂ ಉಳಿದ ಆಟಗಾರರು ಸುಲಭವಾಗಿ ವಿಕೆಟ್ ಚೆಲ್ಲಿದ್ದರಿಂದ ತಂಡ ಜಯದ ದಡ ಸೇರಲು ಸಾಧ್ಯವಾಗಲಿಲ್ಲ. ಎ; ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್, ಮಾ ೫ ರಂದು ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ
ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಭಾರತದ ಪರ ವರುಣ್ ಚಕ್ರವರ್ತಿ 42 ಕ್ಕೆ ಐದು, ಕುಲದೀಪ್ ಯಾದವ್ 56 ಕ್ಕೆ ಎರಡು,ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಭಾರತ, ಶ್ರೇಯಸ್ ಅಯ್ಯರ್ ಸಿಡಿಸಿದ ಭರ್ಜರಿ ಅರ್ಧ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಸೇರಿಸಿತು