Thursday, July 23, 2026
Homeಜಿಲ್ಲೆದಕ್ಷಿಣ ಕನ್ನಡ : ದೇಶದಲ್ಲಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ : ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್...

ದಕ್ಷಿಣ ಕನ್ನಡ : ದೇಶದಲ್ಲಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ : ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ .

ದಕ್ಷಿಣ ಕನ್ನಡ : ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವ ಹಿನ್ನೆಲೆ ಅದನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ‘ಜ್ಞಾನವಾಪಿ ನಮ್ಮದು, ನಮ್ಮದಾಗೆ ಉಳಿಯುವುದು ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ .ಲೋಕಾಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ವೇಳೆ ದೇಶದಲ್ಲಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ ಎಂದು ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಬಹಿರಂಗ ಕರೆ ಕೊಟ್ಟಿದ್ದಾರೆ.

ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ. ಈ ದೇಶದಲ್ಲಿ ಕಾನೂನು ಇದ್ಯಾ?, ಕಾನೂನು ಸತ್ತು ಹೋಗಿದೆ. ಯಾವ ಬೆಲೆ ತೆತ್ತಾದರೂ ಮಸೀದಿ, ಮಂದಿರ, ಚರ್ಚ್​ಗಳನ್ನು ಉಳಿಸಿಕೊಳ್ಳಬೇಕು. ‘ಜ್ಞಾನವಾಪಿ ವಿಷಯ ಕುರಿತು ಹೈಕೋರ್ಟ್​ನಲ್ಲಿ ಕೇಸು ನಡೀತಾ ಇತ್ತು. ಆದರೂ ತರಾತುರಿಯಲ್ಲಿ ಕೆಳಗಿನ ಕೋರ್ಟ್ ನ ಜಡ್ಜ್ ಪೂಜೆಗೆ ಅವಕಾಶ ಕೊಟ್ಟರು ಎಂದು ಕಿಡಿಕಾರಿದ್ದಾರೆ.ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ ಪೂಜಾ ಸ್ಥಳ ಕಾಯಿದೆಯಡಿ ಯಥಾಸ್ಥಿತಿ ಆದೇಶ ಇದೆ. ಆದರೆ, ಆ ಕಾನೂನಿಗೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದಿದ್ದನ್ನ ಅಲ್ಲೇ ಉಳಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಠಿ ಏಟು ತಿನ್ನಲು ಹಾಗೂ ಹುತಾತ್ಮರಾಗಲು ಎಲ್ಲರೂ ತಯಾರಾಗಿ. ನಾವು ಇವತ್ತಲ್ಲ, ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ.ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಹಾಗೂ ಖರ್ಗೆ ಉಳಿಸ್ತಾರೆ ಎಂದು ಕಾಯಬೇಡಿ. ಜೈಲಿಗೆ ಹೋಗಲು, ಕೇಸುಗಳನ್ನ ಹಾಕಿಸಿಕೊಳ್ಳಲು, ಯಾರೋ ಉಳಿಸ್ತಾರೆ ಅಂತ ಕಾಯಬೇಡಿ, ಬೀದಿಗಿಳಿದು ಹೋರಾಡಿ. ನಾವೆಲ್ಲರೂ ಸಂಘರ್ಷಕ್ಕೆ ತಯಾರಾಗೋಣ ಎಂದು ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕರೆ ಕೊಟ್ಟಿದ್ದಾರೆ .

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular