Saturday, July 25, 2026
Homeರಾಜ್ಯತುಮಕೂರು : ತಿಥಿಗೆ ಹೊರಟವರಿಗೆ ಲಾರಿ ಡಿಕ್ಕಿ ,ಮೂವರು ಸ್ಥಳದಲ್ಲಿ ಸಾವು.

ತುಮಕೂರು : ತಿಥಿಗೆ ಹೊರಟವರಿಗೆ ಲಾರಿ ಡಿಕ್ಕಿ ,ಮೂವರು ಸ್ಥಳದಲ್ಲಿ ಸಾವು.

ತುಮಕೂರು : ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅರಸಾಪುರ ದ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ಸಂಭವಿಸಿ ಮೃತಪಟ್ಟವರು ಒಂದೇ ಮನೆಗೆ ಸೇರಿದವರು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ವಿರಣ್ಣನಹಳ್ಳಿ ತಾಂಡದ ವಾಸಿಯಾದ ಅನಿತಮ್ಮ (40) ಇವರ ಮಗ. ಬಾಲಾಜಿ (18) ಹಾಗೂ ಇವರ ಮೈದನ ಮಗನಾದ. ಪವನ್ ಕುಮಾರ್ (26) ಸಾವಿಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಗೌರಿಬಿದನೂರು ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ತನ್ನ ಸಂಬಂದಿಕರ ತಿಥಿಗೆ ಹೊಗುತಿದ್ದರು ಎನ್ನಲಾಗಿದೆ.

ಗೌರಿಬಿದನೂರು ಕಡೆಯಿಂದ ಬಂದ ಲಾರಿಯು KA – 40. 5835..ಮಧುಗಿರಿ ಕಡೆಯಿಂದ ಬರುತ್ತಿದ್ದ ಆಕ್ಟೀವ್ ಹೋಂಡ KA 64. R -3584.ದ್ವಿಚಕ್ರ ವಾಹನಕ್ಕೆ ಗುದ್ದಿದೆ.

ರಭಸವಾಗಿ ಗುದ್ದಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದವರು ಆಯಾ ತಪ್ಪಿ ಕಳಗೆ ಬಿದ್ದಾಗಲು ಲಾರಿ ನಿಲ್ಲಿಸದ ಪರಿಣಾಮ ಲಾರಿ ಚಕ್ರಕ್ಕೆ ಸಿಕ್ಕಿದರೂ ಗಮನಿಸದೆ ಸುಮಾರು ದೂರ ಎಳೆದು ಕೊಂಡು ಹೋಗಿದ್ದ ಚಾಲಕ.

ನಂತರ ಗಮನಿಸಿ ಲಾರಿಯಿಂದ ಇಳಿದ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕೊರಟಗೆರೆ ಠಾಣೆಯ ಸಿಪಿಐ .ಕೆ. ಸುರೇಶ್. ಪಿಎಸ್ಐ ಚೇತನ್ ಕುಮಾರ್. ಎ.ಎಸ್.ಪಿ.ಮರಿಯಪ್ಪ
ಡಿವೈಎಸ್ಪಿ ,ಎನ್. ಬಿ.ರಾಮಚಂದ್ರಪ್ಪ . ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular