Wednesday, August 12, 2026
Homeವಿದೇಶಡಮಾಸ್ಕಸ್ : ಸಿರಿಯಾದ ಪದಚ್ಯುತ ಅಧ್ಯಕ್ಷ ಅಸ್ಸಾದ್‌ಗೆ ಮರಣದಂಡನೆ : ಯುದ್ಧಾಪರಾಧ ಪ್ರಕರಣದಲ್ಲಿ ಕೋರ್ಟ್ ಮಹತ್ವದ...

ಡಮಾಸ್ಕಸ್ : ಸಿರಿಯಾದ ಪದಚ್ಯುತ ಅಧ್ಯಕ್ಷ ಅಸ್ಸಾದ್‌ಗೆ ಮರಣದಂಡನೆ : ಯುದ್ಧಾಪರಾಧ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು.

ಡಮಾಸ್ಕಸ್ : ಸಿರಿಯಾದಲ್ಲಿ 14 ವರ್ಷಗಳ ಕಾಲ ನಡೆದ ಸಂಘರ್ಷದ ವೇಳೆ ನಡೆದಿರುವ ಯುದ್ಧಾಪರಾಧಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪದಚ್ಯುತ ಅಧ್ಯಕ್ಷ ಬಷರ್ ಅಸ್ಸಾದ್ ಹಾಗೂ ಅವರ ಸೋದರಸಂಬಂಧಿ ನಜೀಬ್ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ವರದಿಯಾಗಿದೆ.

ಅಸ್ಸಾದ್ ಆಡಳಿತವು ಯುದ್ಧಾಪರಾಧಗಳಿಗೆ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡಿತ್ತು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ. 2024ರಲ್ಲೇ ರಷ್ಯಾಗೆ ಪರಾರಿ
2024ರಲ್ಲಿ ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಬಷರ್ ಅಸ್ಸಾದ್ ಹಾಗೂ ಅವರ ಸಹೋದರ ಮಾಹೆರ್ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದರು. ಹೀಗಾಗಿ ನ್ಯಾಯಾಲಯವು ಅವರ ಗೈರಿನಲ್ಲಿಯೇ ತೀರ್ಪು ಪ್ರಕಟಿಸಿದೆ.

ಅಸ್ಸಾದ್ ಹಾಗೂ ಮಾಹೆರ್ ಅವರನ್ನು ಸಿರಿಯಾಕ್ಕೆ ಹಸ್ತಾಂತರಿಸುವಂತೆ ಹೊಸ ಆಡಳಿತವು ರಷ್ಯಾಗೆ ಮನವಿ ಮಾಡಿದೆ. ಹದಿಹರೆಯದ ಮಕ್ಕಳ ಬಂಧನ, ಚಿತ್ರಹಿಂಸೆ ಆರೋಪ
ದಕ್ಷಿಣ ಸಿರಿಯಾದ ದಾರಾ ಪ್ರಾಂತ್ಯದಲ್ಲಿ ಅಸ್ಸಾದ್ ಅವರ ಸೋದರಸಂಬಂಧಿ ನಜೀಬ್ ಅವರ ಕೆಲವು ಕ್ರಮಗಳು ದಂಗೆಗೆ ಪ್ರಚೋದನೆ ನೀಡಿದ್ದವು ಎಂದು ಆರೋಪಿಸಲಾಗಿದೆ.

ಅಸ್ಸಾದ್ ಆಡಳಿತದ ಅವಧಿಯಲ್ಲಿ ಬ್ರಿಗೇಡಿಯರ್ ಜನರಲ್ ಆಗಿದ್ದ ನಜೀಬ್, ಹದಿಹರೆಯದ ಮಕ್ಕಳನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ನಜೀಬ್ ಪ್ರಸ್ತುತ ಜೈಲಿನಲ್ಲಿದ್ದು, ಅವರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular