ಟೆಹ್ರಾನ್ : ಇರಾನ್ನ ನತಾಂಜ್ ಪ್ರದೇಶದಲ್ಲಿರುವ ಶಹೀದ್ ಅಹ್ಮದಿ ರೋಶನ್ ಅಣ್ವಸ್ತ್ರ ಸಮೃದ್ಧಿ ಕೇಂದ್ರ ಮೇಲೆ ಶನಿವಾರ ಬೆಳಗ್ಗೆ ಅಮೆರಿಕಇಸ್ರೇಲ್ ಮತ್ತೊಮ್ಮೆ ಜಂಟಿ ವಾಯುದಾಳಿ ನಡೆಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಮುಗಿಸುವ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ತನ್ಮೂಲಕ ಇರಾನ್ ಅಣ್ವಸ್ತç ಮೂಲ ಸೌಕರ್ಯಗಳನ್ನು ಯುದ್ಧ ಮುಗಿಯುವ ಮೊದಲು ಸಂಪೂರ್ಣ ನಾಶ ಮಾಡುವುದಕ್ಕೆ ಅಮೆರಿಕ-ಇಸ್ರೇಲ್ ಪಣ ತೊಟ್ಟಿವೆ. ಈ ದಾಳಿಯನ್ನು ಇರಾನ್ನ ರಾಷ್ಟಿçÃಯ ಪರಮಾಣು ಸಂಸ್ಥೆ ಖಚಿತಪಡಿಸುವುದರೊಂದಿಗೆ ಸ್ಥಳದಲ್ಲಿ ವಿಕಿರಣಶೀಲ ವಸ್ತುಗಳ ಸೋರಿಕೆಯಾಗಿಲ್ಲ ಮತ್ತು ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದೂ ತಿಳಿಸಿದೆ.
ಆಪರೇಷನ್ ರೈಸಿಂಗ್ ಲಯನ್ ಮೂಲಕ ಇರಾನ್ನ ಪರಮಾಣು ಮೂಲ ಸೌಕರ್ಯಗಳನ್ನು ನಾಶ ಮಾಡಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದ್ದು ಅಚ್ಚರಿ ತಂದಿದೆ. ಅಮೆರಿಕ ಇದೇ ಅಣ್ವಸ್ತç ಕೇಂದ್ರ ಮೇಲೆ ಕಳೆದ ಜೂನ್ನಲ್ಲಿ ೧೨ ದಿನಗಳ ಸಂಘರ್ಷದಲ್ಲಿ ಹಾಗೂ ಹಾಲಿ ಯುದ್ಧದ ಮೊದಲ ವಾರದಲ್ಲಿ ಬಿ-೨ ಬಾಂಬರ್ ವಿಮಾನಗಳ ಮೂಲಕ ಬಂಕರ್ ಬಸ್ಟರ್ ಬಾಂಬ್ ಬಳಸಿ ದಾಳಿ ಮಾಡಿತ್ತು. ಇದು ಶತ್ರುಗಳು ನಡೆಸಿದ ಒಂದು ಕ್ರಿಮಿನಲ್ ದಾಳಿ ಎಂದು ಇರಾನ್ ತೀವ್ರವಾಗಿ ಖಂಡಿಸಿದೆ. ಜೊತೆಗೆ ಪರಮಾಣು ಶಸ್ತಾçಸ್ತçಗಳ ಪ್ರಸರಣ ನಿಷೇಧ ಒಪ್ಪಂದ(ಎನ್ಪಿಟಿ) ಮತ್ತು ಪರಮಾಣು ಸುರಕ್ಷತೆಯ ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದೆ.
ಮಧ್ಯಪ್ರಾಚ್ಯದ ಕಲಹ ಆ ಪ್ರದೇಶವನ್ನು ಮೀರಿ ತೀವ್ರಗೊಂಡಿದ್ದು, ಹಿಂದೂ ಮಹಾ ಸಾಗರದ ಮಧ್ಯದ ಡಿಯಾಗೋ ಗಾರ್ಸಿಯಾ ದ್ವೀಪದಲ್ಲಿರುವ ಅಮೆರಿಕ-ಯುಕೆ ಜಂಟಿ ಸೇನಾ ನೆಲೆ ಮೇಲೆ ಇರಾನ್ ಎರಡು ಮಧ್ಯಂತರ ಖAಡಾAತರ ಕ್ಷಿಪಣಿ ಮೂಲಕ ದಾಳಿ ನಡೆಸಲು ಪ್ರಯತ್ನಿಸಿ ವಿಫಲವಾಗಿದೆ. ಇರಾನ್ನಿಂದ ಸುಮಾರು 4೦೦೦ ಕೀ.ಮಿ ದೂರದಲ್ಲಿರುವ ಸೇನಾನೆಲೆ ಮೇಲೆ ದಾಳಿ ನಡೆದಿದ್ದು, ಇರಾನ್ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಮಧ್ಯಂತರ ಖಂಡಾAತರ ಕ್ಷಿಪಣಿಯನ್ನು ಬಳಸಿದೆ. ಇರಾನ್ ಹಾರಿಸಿದ ಮೊದಲ ಕ್ಷಿಪಣಿಯನ್ನು ಅಮೆರಿಕ ನೌಕೆ ಎಸ್ಎಮ್-೩ ಇಂಟರ್ಸೆಪ್ಟರ್ ಬಳಸಿ ಮಾರ್ಗ ಮಧ್ಯೆಯೇ ತಡೆದಿದೆ ಎನ್ನಲಾಗಿದೆ. ಇನ್ನೊಂದು ಕ್ಷಿಪಣಿ ತಡೆಯುವಲ್ಲಿ ಸಫಲವಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹಿಂದೂಮಹಾಸಾಗರ ಪ್ರದೇಶದಲ್ಲಿ ಈ ಹಿಂದೆ ಇರಾನ್ ಯುದ್ಧ ಹಡಗು ಐರೀಸ್ ದೇನಾ ಅಮೆರಿಕ ದಾಳಿಯಿಂದ ಮುಳುಗಿ 85 ನಾವಿಕರು ಮೃತಪಟ್ಟಿದ್ದರು. ಇದು ಎರಡನೇ ಘಟನೆಯಾಗಿದ್ದು ಭಾರತಕ್ಕೆ ಹತ್ತಿರವಾಗಿರುವ ಪ್ರದೇಶದಲ್ಲಿ ದಾಳಿಯಾಗುತ್ತಿರುವುದು ಕಳವಳ ಉಂಟುಮಾಡಿದೆ.
ಈ ಅಣ್ವಸ್ತç ಸಮೃದ್ಧಿ ಘಟಕ ನತಾಂಜ್ ಪ್ರದೇಶದಲ್ಲಿರುವ ದೊಡ್ಡ ಪರ್ವತಗಳ ಆಳದಲ್ಲಿ ನಿರ್ಮಿಸಲಾಗಿದ್ದು, ಇರಾನ್ ಅಣ್ವಸ್ತç ಸಂಶೋಧನೆಯ ಪ್ರಮುಖ ಕೇಂದ್ರವಾಗಿದೆ. ಯುರೇನಿಯA ಸಮೃದ್ಧಿಗೆ ಬಳಸುವ ಸಾವಿರಾರು ಸೆಂಟ್ರೀಪ್ಯೂಜ್ಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಪರಿಷ್ಕರಿಸಲ್ಪಟ್ಟ ಯುರೇನಿಯಂ ಬಳಸಿ ಇರಾನ್ ಅಣ್ವಸ್ತç ತಯಾರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ-ಇಸ್ರೇಲ್ ಈ ಜಂಟಿ ದಾಳಿ ನಡೆಸಿದೆ


