Wednesday, November 11, 2026
Homeಜಿಲ್ಲೆಚಿಕ್ಕಮಗಳೂರು : ಮಂತ್ರಘೋಷ ಮೊಳಗುತ್ತಿದ್ದಂತೆ ತಾನಾಗಿಯೇ ತೆರೆದುಕೊಳ್ಳುವ ಗರ್ಭಗುಡಿಯ ಬಾಗಿಲು, ದೇವಿಯ ಪವಾಡಕ್ಕೆ ಸಾಕ್ಷಿಯಾದ ಕಾಫಿನಾಡು..!

ಚಿಕ್ಕಮಗಳೂರು : ಮಂತ್ರಘೋಷ ಮೊಳಗುತ್ತಿದ್ದಂತೆ ತಾನಾಗಿಯೇ ತೆರೆದುಕೊಳ್ಳುವ ಗರ್ಭಗುಡಿಯ ಬಾಗಿಲು, ದೇವಿಯ ಪವಾಡಕ್ಕೆ ಸಾಕ್ಷಿಯಾದ ಕಾಫಿನಾಡು..!

ಚಿಕ್ಕಮಗಳೂರು : ಆಧುನಿಕ ಯುಗದಲ್ಲೂ ದೈವದ ಪವಾಡವೆಂಬ ನಂಬಿಕೆಗೆ ಸಾಕ್ಷಿಯಾಗುವ ಅಪರೂಪದ ದೃಶ್ಯವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಂಡುಬರುತ್ತದೆ. ಮಂತ್ರಘೋಷ ಮೊಳಗುತ್ತಿದ್ದಂತೆ ದೇವಾಲಯದ ಗರ್ಭಗುಡಿಯ ಮರದ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಚಿಕ್ಕಮಗಳೂರು ತಾಲೂಕಿನ ಅರಿಶಿಣಗುಪ್ಪೆ ಗ್ರಾಮದ ದೇವಿರಮ್ಮ ದೇವಾಲಯದಲ್ಲಿ ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯಂದು ಈ ಅಪರೂಪದ ಘಟನೆ ನಡೆಯುತ್ತದೆ. ದೇವಿರಮ್ಮ ದೇವರು ಗುಡಿ ಸೇರುವ ಸಂದರ್ಭದಲ್ಲಿ ಮಂತ್ರಘೋಷದೊಂದಿಗೆ ಗರ್ಭಗುಡಿಯ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುತ್ತದೆ ಎಂದು ಸ್ಥಳೀಯರು ಹಾಗೂ ಭಕ್ತರು ನಂಬುತ್ತಾರೆ.

ಅರಿಶಿಣಗುಪ್ಪೆ ದೇವಿರಮ್ಮ, ಬಿಂಡಿಗ ದೇವಿರಮ್ಮನ ಸಹೋದರಿ ಎಂಬ ಪ್ರತೀತಿಯೂ ಇದೆ. ಈ ವಿಶಿಷ್ಟ ಆಚರಣೆ ಮತ್ತು ಬಾಗಿಲು ತೆರೆದುಕೊಳ್ಳುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

ದೈವದ ಈ ಅಪರೂಪದ ಮಹಿಮೆಯನ್ನು ಕಣ್ತುಂಬಿಕೊಳ್ಳುವ ಭಕ್ತರು ಇದನ್ನು ದೇವಿಯ ಪವಾಡವೆಂದೇ ನಂಬಿದ್ದಾರೆ. ದೀಪಾವಳಿ ಅಮಾವಾಸ್ಯೆಯಂದು ನಡೆಯುವ ಈ ವಿಶಿಷ್ಟ ಧಾರ್ಮಿಕ ಆಚರಣೆ ಕಾಫಿನಾಡಿನ ಭಕ್ತರ ಗಮನ ಸೆಳೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular