ಗದಗ ; ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿ ಆರು ಜನರಿಗೆ ಗಾಯಗೊಂಡ ಘಟನೆ ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಆದಿಯವರ ಎನ್ನುವವರ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದ್ದು ಲಕ್ಷ್ಮವ್ವ ಕಣವಿ, ಬಸವಣ್ಣೆವ್ವ ಹೊರಪೇಟಿ, ಮಂಜುಳಾ, ನಿರ್ಮಲಾ ಹಾಗೂ 14 ವರ್ಷದ ಶರಣಪ್ಪ ಹಾಲಿನ್ ಗೆ ಗಂಭೀರ ಗಾಯಗಳಾಗಿದೆ.
ಸಿಲೆಂಡರ್ ಸೋರಿಕೆ ವಾಸನೆ ಬಂದು ಅಕ್ಕಪಕ್ಕದ ಮನೆಯವರು ಮನೆ ಬಾಗಿಲು ತೆಗೆದು ನೋಡ್ತಿದ್ದಂತೆ ಸಿಲೆಂಡರ್ ಸ್ಪೋಟಗೊಂಡಿದ್ದು ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡವಾಗಿ ಅಂಬುಲೆನ್ಸ್ ಬಂದ ಹಿನ್ನೆಲೆ ಗ್ರಾಮಸ್ಥರು ಕಿಡಿಕಾರಿದ್ದು ಬೈಕ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

