Friday, March 13, 2026
Flats for sale
Homeರಾಜ್ಯಗದಗ : ಬೆಂಗಾವಲು ವಾಹನಕ್ಕೆ ನಟ ಯಶ್​ ಅಭಿಮಾನಿಯ ಬೈಕ್ ಡಿಕ್ಕಿ; ಚಿಕಿತ್ಸೆ ಫಲಿಸದೆ ಯುವಕ...

ಗದಗ : ಬೆಂಗಾವಲು ವಾಹನಕ್ಕೆ ನಟ ಯಶ್​ ಅಭಿಮಾನಿಯ ಬೈಕ್ ಡಿಕ್ಕಿ; ಚಿಕಿತ್ಸೆ ಫಲಿಸದೆ ಯುವಕ ಸಾವು.

ಗದಗ : ಕನ್ನಡ ಚಲನ ಚಿತ್ರದ ರಾಕಿಂಗ್‌ ಸ್ಟಾರ್ ಯಶ್ ಅವರ 38ನೇ ಹುಟ್ಟಹಬ್ಬದ ಹಿನ್ನೆಲೆ ಬರ್ತ್‌ಡೇ ಶುಭಾಶಯ ಕೋರಿ ಬ್ಯಾನರ್ ಹಾಕುವಾಗ ಮೂವರು ಅಭಿಮಾನಿಗಳು ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದರು. ಈ ಹಿನ್ನೆಲೆ ಮೂವರು ಅಭಿಮಾನಿಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಬಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಯಶ್ ವಾಪಸ್‌ ತೆರಳುತ್ತಿದ್ದಾಗ ಮತ್ತೊಂದು ಅವಘಡ ಸಂಭವದೆ. ನಿನ್ನೆ ರಾತ್ರೆ ನಟ ಯಶ್​ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಯುವಕನೋರ್ವನಿಗೆ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹುಟ್ಟಹಬ್ಬದ ದಿನವೇ ಅಭಿಮಾನಿಗಳ ಸಾವು ಯಶ್​ಗೆ ಅಘಾತ ತಂದಿದ್ದು ,ಈ ಬಗ್ಗೆ ಯಶ್ ಕೂಡ ನಾನು ಇನ್ನು ಮುಂದೆ ಹುಟ್ಟಿದ ಹಬ್ಬ ಆಚರಿಸುವುದಿಲ್ಲಎಂದು ತಿಳಿಸಿದ್ದರು ,ತನ್ನ ನೆಚ್ಚಿನ ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿಖಿಲ್​ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ.

ಗದಗದಲ್ಲಿ ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಶಾಕ್‌ಗೆ ಒಳಗಾಗಿದ್ದ ಯಶ್ ಥಾಯ್ಲೆಂಟ್‌ನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್ ಮೊಟಕು ಗೊಳಿಸಿ ಸಂಜೆ ಸೀದಾ ಗೋವಾದ ಫ್ಲೈಟ್ ಹತ್ತಿ ಗೋವಾದಿಂದ ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂದು ಅಲ್ಲಿಂದ ಕಾರ್‌ನ ಮೂಲಕ ಗದಗ ಜಿಲ್ಲೆಯ ಸೂರಣಗಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ದುಃಖದ ಕಡಲಲ್ಲಿ ಮುಳುಗಿದ್ದ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರೋ ಗದಗಿನ ಜಿಮ್ಸ್ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

ಗದಗ ಎಸ್​​ಪಿ ಬಿ.ಎಸ್​.ನೇಮಗೌಡ ಮಾತನಾಡಿ, ಬೈಕ್​ಗೆ ಡಿಕ್ಕಿ ಹೊಡೆದ ಜೀಪ್ ಯಶ್ ಬೆಂಗಾವಲು ವಾಹನ ಅಲ್ಲ. ಅದು ಪೊಲೀಸ್ ಹೆಡ್ ಕ್ವಾಟರ್​ಗೆ ಹೋಗುವ ಪೊಲೀಸ್ ಜೀಪ್. ನಟ ಯಶ್ ಅವರನ್ನು ಬೈಪಾಸ್ ಹೈವೇ ಯಿಂದಲೇ ಹುಬ್ಬಳ್ಳಿಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ ಒಟ್ಟಿನಲ್ಲಿ ಈ ಹುಚ್ಚು ಅಭಿಮಾನದಿಂದ ಕುಟುಂಬಸ್ಥರು ಆಧಾರವಾಗಿಗುವ ಅಮೂಲ್ಯ ೪ ಜೀವವನ್ನು ಕಳೆದು ಕೊಂಡಿದ್ದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular